ಮಕ್ಕಳ ಬಳಸಿ ಭಿಕ್ಷಾಟನೆ
Update: 2016-01-08 12:03 IST
ಮಾನ್ಯರೆ,
ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಗಿಳಿಯುವವರ ವಿರುದ್ಧ ದ.ಕ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿರುವುದು ಪ್ರಶಂಸನೀಯ.
ಮಂಗಳೂರು ಸೇರಿದಂತೆ ಜಿಲ್ಲೆಯ ಹೆಚ್ಚಿನ ಕಡೆ ಹೆಚ್ಚು ಜನ ಸೇರುವಲ್ಲಿ ಎಳೆಯ ಮಕ್ಕಳನ್ನು ಬಿಸಿಲಲ್ಲಿ ಒಣಗಿಸಿಕೊಂಡು ಭಿಕ್ಷೆ ಬೇಡುವುದು ಕಂಡು ಬರುತ್ತಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ಜರಗಿಸುವುದು ಅಗತ್ಯವಾಗಿದೆ. ಮತ್ತು ಇಂತಹವರಿಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.