×
Ad

ಶಾರೂಖ್‌ , ಆಮಿರ್‌ ಸೇರಿದಂತೆ ಬಾಲಿವುಡ್‌ ತಾರೆಯರ ಭದ್ರತಾ ಪ್ರಮಾಣ ಇಳಿಕೆ

Update: 2016-01-08 12:36 IST


ಮುಂಬೈ, ಜ.8: ಬಾಲಿವುಡ್‌ ತಾರೆಯರಾದ ಶಾರೂಖ್‌ ಖಾನ್‌ , ಆಮಿರ್‌ ಖಾನ್‌ಗೆ  ನೀಡಲಾಗಿದ್ದ ಭದ್ರತಾ ಪ್ರಮಾಣವನ್ನು ಮುಂಬೈ ಪೊಲೀಸರು ಕಡಿತಗೊಳಿಸಿದ್ದಾರೆ. ಹಲವು ಮಂದಿ ಚಿತ್ರ ತಾರೆಯರಿಗೆ ನೀಡಲಾಗಿದ್ದ ಭದ್ರತಾ ಸೌಲಭ್ಯವನ್ನು ಪೊಲೀಸರು ಹಿಂಪಡೆದಿದ್ದಾರೆ.
ಅಸಹಿಷ್ಣುತೆಯ ವಿವಾದದ ಹಿನ್ನೆಲೆಯಲ್ಲಿ ಶಾರೂಖ್‌, ಆಮಿರ್‌ಗೆ ಗರಿಷ್ಠ ಭದ್ರತೆ ನೀಡಲಾಗಿತ್ತು. ಈಗ ಎಲ್ಲ ತಣ್ಣಗಾಗಿರುವ ಹಿನ್ನೆಲೆಯಲ್ಲಿ ಇವರಿಗೆ ನೀಡಲಾಗಿರುವ ಭದ್ರತೆಯ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ಇನ್ನು ಮುಂದಕ್ಕೆ ಶಾರೂಖ್‌ ಮತ್ತು ಆಮಿರ್‌  ಭದ್ರತೆಯ ಜವಾಬ್ದಾರಿಯನ್ನು  ಇಬ್ಬರು ಶಸ್ತ್ರ ಸಜ್ಜಿತ ಪೊಲೀಸ್‌ ಕಾನ್‌ಸ್ಟೇಬಲ್‌ಗಳು ನೋಡಿಕೊಳ್ಳಲಿದ್ದಾರೆ  ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಚಿತ್ರ ನಿರ್ಮಾಪಕ ವಿಧು ವಿನೋದ್‌ ಚೋಪ್ರಾ, ನಿರ್ದೇಶಕರಾದ  ರಾಜ್‌ಕುಮಾರ್‌ ಇರಾನಿ, ಫರಹಾ ಖಾನ್‌ ಮತ್ತು ಅವರ ಸಹೋದರರಾದ  ಅಲಿ ಹಾಗೂ ಕರೀಮ್‌ ಮೊರಾಣಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ.
ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್ ಬಚ್ಚನ್‌, ಅಕ್ಷಯ್‌ ಕುಮಾರ್‌ ಮತ್ತು ಚಿತ್ರ ನಿರ್ಮಾಪಕ ಮಹೇಶ್‌ ಭಟ್‌ ಸೇರಿದಂತೆ ೧೫ ಮಂದಿ ಬಾಲಿವುಡ್‌  ತಾರೆಯರಿಗೆ ಭದ್ರತೆಯನ್ನು ಮುಂದುವರಿಸಲಾಗಿದೆ ಮುಂಬೈ ಪೊಲೀಸ್‌ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News