ಲೋಧಾ ವರದಿ ನೀಡೀತೆಬಿಸಿಸಿಐಗೆ ಕಾಯಕಲ್ಪ ?
ಲೋಧಾ ಸಮಿತಿಯ ಸಲಹೆಗಳಿಗೆ ನಿಜಕ್ಕೂ ಸಾಹಿತ್ಯಿಕ ಮೌಲ್ಯವಿರುವುದು ಹೌದಾದರೂ, ಅದರ ಸೂಚನೆಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದು ಅನುಮಾನವೇ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕಾಯ್ದೆಯನ್ನು ಸಂಸತ್ತು ಜಾರಿಗೆ ತರುವುದರ ಮೂಲಕ ಮಾತ್ರವೇ ಕ್ರೀಡಾ ಸಂಸ್ಥೆಗಳನ್ನು ಮುತ್ತಿರುವ ರೋಗಗಳನ್ನು ಗುಣಪಡಿಸಲು ಸಾಧ್ಯ. ಆದರೆ ಇದಕ್ಕೆ ರಾಜಕೀಯ ಪ್ರಾಮುಖ್ಯ ಮತ್ತು ಇಚ್ಛಾಶಕ್ತಿ ಕೊರತೆಯು ಕಾರಣವಾಗಿದೆ.
ಇತ್ತೀಚೆಗೆ, ತುಂಬಿದ ಸಭೆಯಲ್ಲಿ, ಭಾರತದ ಕ್ರಿಕೆಟ್‌ನಲ್ಲಿ ಪಾರದರ್ಶಕತೆಯನ್ನು ತರಲು ಸುಪ್ರೀಂ ಕೋರ್ಟ್ ನಿರ್ವಚಿಸಿದ್ದ ಸಮಿತಿಯ ಅಧ್ಯಕ್ಷ ರಾಜೇಂದ್ರ ಮಲ್ ಲೋಧಾರವರು ತಮ್ಮ ವರದಿಯನ್ನು ಬಿಡುಗಡೆ ಮಾಡಿದರು. ಈ ವರದಿಯು ಸುಮಧುರವಾದ ಭಾಷೆ, ಬಿಸಿಸಿಐ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಕುತೂಹಲಕರ ಘಟನೆಗಳು ತುಂಬಿದ ಒಂದು ರಸವತ್ತಾದ ಓದಿಗೆ ಅರ್ಹವಾಗಿರುವ ವಸ್ತುವಾಗಿದೆ. ಜಗತ್ತಿನ ಅತಿ ಶ್ರೀಮಂತ ಕ್ರೀಡಾ ಸಂಸ್ಥೆಯೊಂದರಲ್ಲಿನ ಹುಳುಕುಗಳನ್ನು ಸರಿಪಡಿಸಲು ಈ ವರದಿಯು ಸೂಚಿಸುವ ಪರಿಕ್ರಮಗಳು ಮಾತ್ರ ಶೀಥಲೀಕರಣ ಘಟಕದಲ್ಲಿ ವ್ಯರ್ಥವಾಗಿ ಉಳಿದುಹೋಗುವಂತೆ ಕಾಣಿಸುತ್ತದೆ.. 2003ರ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಸ್ಪಾಟ್ ಫಿಕ್ಸಿಂಗ್ ಮತ್ತು ಬಾಜಿಕಟ್ಟುವ ಹಗರಣದ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಲೋಧಾರ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಭನ್ ಮತ್ತು ಆರ್.ವಿ. ರವೀಂದ್ರನ್‌ರನ್ನು ಒಳಗೊಂಡ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿಯ ಮುಂದಿದ್ದ ಸವಾಲುಗಳೆಂದರೆ, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲಿಕರಾಗಿದ್ದ ರಾಜ್ ಕುಂದ್ರಾ ಮತ್ತು ಗುರುನಾಥ್ ಮೇಯಪ್ಪನ್‌ರಿಗೆ ಈ ಹಗರಣದ ಸಂಬಂಧ ಎಷ್ಟು ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕು ಮತ್ತು ಆ ಸಮಯದಲ್ಲಿ ಐಪಿಎಲ್‌ನ ಸಿ.ಇ.ಒ ಆಗಿದ್ದ ಸುಂದರ್ ರಾಮನ್‌ರ ಪಾತ್ರವೂ ಈ ಹಗರಣದಲ್ಲಿ ಇತ್ತೇ ಎಂಬುದನ್ನು ಪತ್ತೆ ಮಾಡುವುದಾಗಿತ್ತು. ಜುಲೈ 14ರಂದು ಈ ಸಮಿತಿಯು ರಾಜ್ ಕುಂದ್ರಾ ಮತ್ತು ಮೇಯಪ್ಪನ್‌ರ ಒಡೆತನದಲ್ಲಿದ್ದ ಫ್ರಾಂಚೈಸಿಗಳಿಗೆ ಎರಡು ವರ್ಷಗಳ ಕಾಲ ನಿಷೇಧ ಮತ್ತು ಈ ಇಬ್ಬರು ವ್ಯಕ್ತಿಗಳಿಗೆ ಆಜೀವ ನಿಷೇಧ ವಿಧಿಸಿತ್ತು. ಮತ್ತು ಮೊನ್ನೆ ಸೋಮವಾರ ಸಮಿತಿಯು ಸುಂದರ್ ರಾಮನ್‌ರ ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲದ ಕಾರಣ ಅವರನ್ನು ಈ ಹಗರಣದಿಂದ ಮುಕ್ತಗೊಳಿಸಿತು. ಹೊಸತೇನಿದೆ? ಬಿಸಿಸಿಐನ ವ್ಯವಹಾರವನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿಯಾಗುವಂತೆ ಮಾಡಲು ಅನುಸರಿಸಬೇಕಾದ ಕ್ರಮಗಳ ಕುರಿತೂ ಸೂಚನೆಗಳನ್ನು ನೀಡುವಂತೆ ಈ ಸಮಿತಿಯನ್ನು ಕೇಳಿಕೊಳ್ಳಲಾಗಿತ್ತು. ಅಂದರೆ, ಬಿಸಿಸಿಐನ ನಿಲುವಳಿಯಲ್ಲಿ ತರಬೇಕಾದ ಬದಲಾವಣೆಗಳು, ಚುನಾವಣೆ ಸಂಘಟಿಸುವಲ್ಲಿ ತರಬೇಕಾದ ಹೊಸ ಕಾನೂನುಗಳು, ಅಧಿಕಾರಿಗಳ ನಿಯೋಜನೆ ಮತ್ತು ಅಮಾನತು ಮಾಡಲು ಬೇಕಾದ ಮಾನದಂಡ-ಕ್ರಮಗಳು, ಹಾಗೂ ಈ ಅಧಿಕಾರಿಗಳಲ್ಲಿ ಉಂಟಾಗುವ ವೈಯಕ್ತಿಕ ಮತ್ತು ಸಂಸ್ಥೆಯ ಏಳಿಗೆಯಲ್ಲಿ ಬರುವ ಸಂಘರ್ಷಗಳು- ಇತ್ಯಾದಿಗಳ ಕುರಿತು ಸಮಿತಿಯು ತನ್ನ ಸೂಚನೆಗಳನ್ನು ಮಂಡಿಸಬೇಕಿತ್ತು. ಬಿಸಿಸಿಐನ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಕೀರ್ತಿ ಅಝಾದ್ ಹಾಗೂ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ಮುಂತಾದವರನ್ನು ಮಾತನಾಡಿಸಿದ ನಂತರ ಸಮಿತಿಯು ತನ್ನ ವರದಿಯನ್ನು ಸೋಮವಾರ ಬಿಡುಗಡೆ ಮಾಡಿತು. ಲೋಧಾ ವರದಿ ಮಾಡಿದ ಸಲಹೆಗಳು ಆಟದ ಆಡಳಿತವನ್ನು ಸ್ವಚ್ಛ ಮತ್ತು ದಕ್ಷಗೊಳಿಸಲು ಮಾಡಿರುವ ಒಳ್ಳೆಯ ಸಲಹೆಗಳೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವು ಯಾವುವೂ ಹೊಸತಲ್ಲ. ಬಿಸಿಸಿಐ ಅನ್ನು ಮಾಹಿತಿ ಹಕ್ಕಿನ ಅಡಿಗೆ ತರುವುದು, ಆಡಳಿತಗಾರರ ಅವಧಿಯನ್ನು ಕಡಿಮೆ ಮಾಡುವುದು, ಆಡಳಿತಗಾರರಿಗೆ ನಿಯಮಗಳನ್ನು ಅಳವಡಿಸುವುದು, ಆಡಳಿತ ಮಂಡಳಿಯಲ್ಲಿ ಆಟಗಾರರು ಇರುವಂತೆ ನೋಡಿಕೊಳ್ಳುವುದು- ಇವೆಲ್ಲವೂ ಸಹ 2013ರ ರಾಷ್ಟ್ರೀಯ ಆಟ ಅಭಿವೃದ್ಧಿ ಕಾಯ್ದೆಯಲ್ಲಿಯೇ ಪ್ರಸ್ತಾಪ ಮಾಡಲ್ಪಟ್ಟಿವೆ.ದಕ್ಕೆ ಮುನ್ನವೇ ಯುಪಿಎ ಸರಕಾರವು ಕ್ರೀಡೆಯಲ್ಲಿನ ಮೋಸವನ್ನು ತಡೆಗಟ್ಟಲು ಒಂದು ಕಾನೂನನ್ನು ರೂಪಿಸಿದ್ದು ಅದು ಸಂಸತ್ತಿನ ಸಮ್ಮತಿಯನ್ನು ಪಡೆಯುವುದು ಮಾತ್ರವೇ ಬಾಕಿಯಿದೆ. ಕ್ರೀಡಾ ಸಂಬಂಧಿತ ಜೂಜನ್ನು ಕಾನುನುಬದ್ಧಗೊಳಿಸುವುದನ್ನು ನಾನು ಈ ಮುನ್ನವೂ ತೆರೆದ ಮನಸ್ಸಿನಿಂದ ಸ್ವಾಗತಿಸಿದ್ದೇನೆ. ಈ ಬಗೆಯ ಸಲಹೆಗಳು ಈ ಹಿಂದೆಯೂ ನ್ಯಾಯಮೂರ್ತಿಗಳಿಂದ, ನೀತಿ ವಿಶ್ಲೇಷಕರಿಂದ ಕೊಡಲ್ಪಟ್ಟಿದ್ದವು (ಮುಕುಲ್ ಮುದ್ಗಲ್ ಎಂಬ ಲೋಧ ಸಮಿತಿಯ ಮುನ್ನಿನ ಸಮಿತಿಯ ನ್ಯಾಯಮೂರ್ತಿ ಸಹ ಈ ಬಗೆಯ ಸಲಹೆಗಳನ್ನೇ ಕೊಟ್ಟಿದ್ದರು). ಇವು ಯಾರ ಕಿವಿಗೂ ಬೀಳದೇ ಹೋದವು.
ಬಿಸಿಸಿಐ ಮಾತ್ರವೇ ಏಕೆ?
ಇತರ ಅನೇಕ ಕ್ರೀಡಾ ಸಂಸ್ಥೆಗಳೂ ಈ ಬಗೆಯ ರೋಗಗಳಿಂದ ಆವೃತ್ತವಾಗಿರುವಾಗಲೂ ಏಕೆ ಬಿಸಿಸಿಐಗೆ ಮಾತ್ರವೇ ಈ ಸಲಹೆಗಳನ್ನು ಹೇರಲಾಗುತ್ತಿದೆ? ಬಿಸಿಸಿಐ ಈ ವರದಿಯಲ್ಲಿನ ಸಲಹೆಗಳನ್ನು ತಿರಸ್ಕರಿಸುವಾಗ ಈ ಪ್ರಶ್ನೆಯನ್ನು ಬಿಸಿಸಿಐ ಖಚಿತವಾಗಿ ಎತ್ತುವ ಅಗತ್ಯವಿದೆ.. ್ಚನ್ಯಾಯಾಲಯವು ಲೋಧಾ ಸಮಿತಿಗೆ ಈ ವರದಿಯನ್ನು ಬಿಸಿಸಿಐಗೆ ಸಲ್ಲಿಸಲು ಸೂಚಿಸಿದೆಯೇ ಹೊರತು ಅದರ ಸಲಹೆಗಳನ್ನು ಖಂಡಿತವಾಗಿ ಜಾರಿಗೆ ತರಬೇಕೆಂಬ ಯಾವ ಷರತ್ತೂ ಅಲ್ಲಿಲ್ಲ. ಹಾಗಾಗಿ ಬಿಸಿಸಿಐ ಅದರ ಸಲಹೆಗಳನ್ನು ಖಂಡಿತ ಪಾಲಿಸಲಾರದು ಸಹ. ಈ ಸಲಹೆಗಳನ್ನು ಖಡಾಖಂಡಿತವಾಗಿ ಜಾರಿಗೆ ತರುವ ಒತ್ತ್ತಾಯವನ್ನು ಸುಪ್ರೀಂ ಕೋರ್ಟ್ ಬಿಸಿಸಿಐ ಮೇಲೆ ಹೇರಿದರೆ ಅದು ಶಕ್ತಿಕೇಂದ್ರಗಳ ನಡುವಿನ ಅಂತರವೆಂಬ ಸಾಂವಿಧಾನಿಕ ತತ್ವವನ್ನು ಮೀರಿದಂತಾಗುವ ಸಂಭವ ಕೂಡಾ ಇರುತ್ತದೆ. ಲೋಧಾ ಸಮಿತಿಯ ಸಲಹೆಗಳಿಗೆ ನಿಜಕ್ಕೂ ಸಾಹಿತ್ಯಿಕ ಮೌಲ್ಯವಿರುವುದು ಹೌದಾದರೂ, ಅದರ ಸೂಚನೆಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದು ಅನುಮಾನವೇ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕಾಯ್ದೆಯನ್ನು ಸಂಸತ್ತು ಜಾರಿಗೆ ತರುವುದರ ಮೂಲಕ ಮಾತ್ರವೇ ಕ್ರೀಡಾ ಸಂಸ್ಥೆಗಳನ್ನು ಮುತ್ತಿರುವ ರೋಗಗಳನ್ನು ಗುಣಪಡಿಸಲು ಸಾಧ್ಯ. ಆದರೆ ಇದಕ್ಕೆ ರಾಜಕೀಯ ಪ್ರಾಮುಖ್ಯ ಮತ್ತು ಇಚ್ಛಾಶಕ್ತಿ ಕೊರತೆಯು ಕಾರಣವಾಗಿದೆ. ಹಾಗಾಗಿ ಈ ಕ್ರೀಡಾ ಸಂಸ್ಥೆಗಳಲ್ಲಿ ತುಂಬಿಹೋಗಿರುವ ರಾಜಕಾರಣಿಗಳು ಮತ್ತು ಸಂಸತ್ತಿನ ಸದಾ ನುಜ್ಜುಗುಜ್ಜಾದ ಅಧಿವೇಶನಗಳ ಸಂದರ್ಭದಲ್ಲಿ ಈ ಕಾಯ್ದೆ ಜಾರಿಗೆ ಬರುವುದೂ ಅನುಮಾನವೇ. ಬಿಸಿಸಿಐಯನ್ನು ಶುಚಿಗೊಳಿಸಿ ಎಂಬ ಮಾಧ್ಯಮದ ಹುಚ್ಚು ಕೂಗಾಟ ಮುಗಿದ ಬಳಿಕ ಕ್ರಿಕೆಟ್ ಪ್ರೇಮಿಗಳು ಈ ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕಿದೆ.
ವರದಿಯಲ್ಲಿರುವುದೇನು?
* ಅಧಿಕಾರ ಸ್ಥಾನದಲ್ಲಿರುವವರು ಕೇವಲ ಮೂರು ಬಾರಿ ಮಾತ್ರ ಆ ಸ್ಥಾನಕ್ಕೆ ನಿಯೋಜಿತರಾಗಬಹುದು (ಸತತ ಎರಡು ಬಾರಿ ಅಧಿಕಾರದಲ್ಲಿರುವುದು ಸೇರಿದಂತೆ)
* ಮುಖ್ಯ ಅಧಿಕಾರಿಗಳಿಗೆ 70 ವರ್ಷಕ್ಕೆ ನಿವೃತ್ತಿ ಕಡ್ಡಾಯ.
* ಬಿಸಿಸಿಐ ಅನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ತರುವುದು.
* ಸರಕಾರದಲ್ಲಿ ಅಧಿಕಾರ ಸ್ಥಾನದಲ್ಲಿದ್ದವರ ಮೇಲೆ ಭ್ರಷ್ಟಾಚಾರದ ಆರೋಪ ಇದ್ದಲ್ಲಿ ಅವರನ್ನು ಬಿಸಿಸಿಐನ ಹುದ್ದೆಗಳಿಗೆ ಆಯ್ಕೆಯಾಗದಂತೆ ನಿರ್ಬಂಧಿಸುವುದು.
* ಆಟಗಾರರ ಮಂಡಳಿಯೊಂದನ್ನು ರಚಿಸಿ ಕ್ರಿಕೆಟ್‌ನ ಆಡಳಿತ ಸಮಿತಿಯ ನಿರ್ಧಾರಗಳಲ್ಲಿ ಈ ಸಮಿತಿಗೆ ಹಕ್ಕನ್ನು ಕೊಡುವುದು.
* ಒಬ್ಬ ಸಮರ್ಥ ಮುಖ್ಯ ಆಡಳಿತ ಅಧಿಕಾರಿಯನ್ನು ಕ್ರಿಕೆಟ್ ಆಟದ ಆಡಳಿತಕ್ಕೆ ನೇಮಿಸುವುದು.
* ಪ್ರತಿ ರಾಜ್ಯದಲ್ಲಿಯೂ ಬಿಸಿಸಿಐನ ಅಡಿಗೆ ಬರುವಂತೆ ಏಕೈಕ ಸಂಸ್ಥೆಯೊಂದು ಮಾತ್ರವೇ ಅಸ್ಥಿತ್ವದಲ್ಲಿರುವಂತೆ ನೋಡಿಕೊಳ್ಳುವುದು.
* ಕ್ರೀಡಾ ಸಂಬಂಧಿತ ಜೂಜನ್ನು ಕಾನೂನುಬದ್ಧಗೊಳಿಸುವುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆಯೊಂದನ್ನು ರೂಪಿಸುವುದು.