ವಿಂಡೀಸ್ ಆಟಗಾರರ ಗುತ್ತಿಗೆ ಪಟ್ಟಿ: ಗೇಲ್,ಬ್ರಾವೊ, ಸಮಿಗೆ ಸ್ಥಾನವಿಲ್ಲ

Update: 2016-01-09 18:05 GMT

 ಜಮೈಕಾ, ಜ.9: ವೆಸ್ಟ್‌ಇಂಡೀಸ್‌ನ ಸ್ಟಾರ್ ಆಟಗಾರರಾದ ಡರೆನ್ ಸಮಿ, ಆ್ಯಂಡ್ರೆ ರಸ್ಸೆಲ್, ಸುಲೇಮಾನ್ ಬೆನ್, ಶಿವನಾರಾಯಣ್ ಚಂದರ್‌ಪಾಲ್ ಹಾಗೂ ಡ್ವೇಯ್ನೆ ಬ್ರಾವೊ ಅವರನ್ನು ಕೆರಿಬಿಯನ್ ಕ್ರಿಕೆಟ್ ಮಂಡಳಿ 2015-16ರ ಅವಧಿಯ ಆಟಗಾರರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿದೆ.

ಕೇಂದ್ರ ಗುತ್ತಿಗೆ ಪಡೆದಿರುವ ಆಟಗಾರರ ಸಂಖ್ಯೆಯನ್ನು 12 ರಿಂದ 15ಕ್ಕೆ ಹೆಚ್ಚಿಸಲಾಗಿದ್ದು, ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಕೂಡ ಪಟ್ಟಿಯಲ್ಲಿಲ್ಲ. ಕಳೆದ ವರ್ಷ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿದ್ದ ಸ್ಪಿನ್ನರ್ ಸುನೀಲ್ ನರೇನ್‌ರನ್ನು ಈ ವರ್ಷ ಕೂಡ ಪರಿಗಣಿಸಲಾಗಿಲ್ಲ ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ(ಡಬ್ಲು ಐಸಿಬಿ) ಶುಕ್ರವಾರ ಹೇಳಿದೆ.

ಆಟಗಾರರ ಗುತ್ತಿಗೆ ಅವಧಿಯು ಅ.1,2015 ರಿಂದ ಸೆ.30,2016ರ ತನಕ ಇರಲಿದೆ. ಈ ವರ್ಷ ಹಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಜೆರ್ಮೈನ್ ಬ್ಲಾಕ್‌ವುಡ್, ಲಿಯೊನ್ ಜಾನ್ಸನ್, ಶೇನ್ ಡೌರಿಚ್, ಶೈ ಹೋಪ್ ಹಾಗೂ ರಾಜೇಂದ್ರ ಚಂದ್ರಿಕ ಅವರು ಪಟ್ಟಿಯಲ್ಲಿದ್ದಾರೆ.

ಡಬ್ಲ್ಯುಸಿಐಬಿ ಆಟಗಾರರ ಗುತ್ತಿಗೆ ಪಟ್ಟಿ ಇಂತಿದೆ:

ಜಾಸನ್ ಹೋಲ್ಡರ್, ಕ್ರೆಗ್ ಬ್ರಾತ್‌ವೇಟ್, ರಾಜೇಂದ್ರ ಚಂದ್ರಿಕ, ಡೆರೆನ್ ಬ್ರಾವೊ, ಮರ್ಲಾನ್ ಸ್ಯಾಮುಯೆಲ್ಸ್, ದಿನೇಶ್ ರಾಮ್ದೀನ್, ದೇವೇಂದ್ರ ಬಿಶೂ, ಶನೊನ್ ಗ್ಯಾಬ್ರಿಯೆಲ್, ಜೆರ್ಮೈನ್ ಬ್ಲಾಕ್‌ವುಡ್, ಜೆರೊಮ್ ಟೇಲರ್ಲ, ಶೇಲ್ಡನ್ ಕಾಟ್ರೆಲ್, ಶೈ ಹೋಪ್, ಶೇನ್ ಡೌರಿಚ್, ಲಿಯೊನ್ ಜಾನ್ಸನ್ ಹಾಗೂ ಕೆಮರ್ ರೋಚ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News