×
Ad

ಅಸಂಘಟಿತ ವಲಯಕ್ಕೆ ಯು-ವಿನ್ ಕಾರ್ಡ್

Update: 2016-01-09 23:52 IST

ಜಮ್ಶೆಡ್ಪುರ, ಜ.9: ಸಾಮಾಜಿಕ ಯೋಜನೆಗಳು ಹಾಗೂ ಲಾಭಗಳನ್ನು ಪಡೆಯಲು ಅನುಕೂಲವಾಗುವಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶೇಷ ಗುರುತು ಸಂಖ್ಯೆ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರ ಕಾರ್ಯೋನ್ಮುಖವಾಗಿದೆ.


ದೇಶದ ಅಸಂಘಟಿತ ವಲಯದ ನೌಕರರಿಗೆ ‘ಅಸಂಘಟಿತ ಕಾರ್ಮಿಕರ ಗುರುತು ಸಂಖ್ಯೆ (ಯು-ಡಬ್ಲುಎಸ್) ಸ್ಮಾರ್ಟ್‌ಕಾರ್ಡ್’ಗಳನ್ನು ಶೀಘ್ರವೇ ನೀಡುವ ಕುರಿತು ಕೆಲಸ ಮಾಡುತ್ತಿದ್ದೇ ವೆಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಧಾನ ಕಾರ್ಮಿಕ ಮತ್ತು ಉದ್ಯೋಗ ಸಲಹೆಗಾರ ಪಿ.ಪಿ.ಮಿತ್ರ ಇಂದಿಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಸಮಾರಂಭವೊಂದರಲ್ಲಿ ಭಾಗವಹಿಸಲು ಉಕ್ಕಿನ ನಗರಿಗೆ ಬಂದಿದ್ದ ಅವರು, ದೇಶದಲ್ಲಿ ಶೇ.93ರಷ್ಟು (ಅಂದಾಜು 40 ಕೋಟಿ) ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಈ ಸಂಬಂಧ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅದನ್ನು ಶೀಘ್ರವೇ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರಕಾರಗಳಿಗೆ ಕಳುಹಿಸ ಲಾಗುವುದು.


ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ ಯೋಜನೆಗಳಂತಹ ಕೇಂದ್ರ ಸರಕಾರಿ ಯೋಜನೆಗಳ ಲಾಭವನ್ನು ಯು-ವಿನ್ ಕಾರ್ಡ್‌ಗಳಿಗೆ ಜೋಡಿಸಲಾಗುವುದೆಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News