×
Ad

ದೇಶೀಯ ಕ್ರಿಕೆಟ್‌ಗೆ ಸಲ್ಮಾನ್ ಬಟ್, ಆಸಿಫ್ ವಾಪಸ್

Update: 2016-01-10 23:06 IST

   ಕರಾಚಿ, ಜ.10: ಪಾಕಿಸ್ತಾನದ ಮಾಜಿ ಟೆಸ್ಟ್ ತಂಡದ ನಾಯಕ ಸಲ್ಮಾನ್ ಬಟ್ ಹಾಗೂ ಬೌಲರ್ ಮುಹಮ್ಮದ್ ಆಸಿಫ್ ರವಿವಾರ ನ್ಯಾಶನಲ್ ಏಕದಿನ ಟೂರ್ನಮೆಂಟ್ ಆಡುವ ಮೂಲಕ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ.

2010ರಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಲಾರ್ಡ್ಸ್ ಟೆಸ್ಟ್‌ನಲ್ಲಿ ಹಣದಾಸೆಗೆ ಉದ್ದೇಶಪೂರ್ವಕವಾಗಿ ನೋ-ಬಾಲ್ ಎಸೆದ ಹಗರಣಕ್ಕೆ ಸಂಬಂಧಿಸಿ ಐಸಿಸಿ ಬಟ್, ಮುಹಮ್ಮದ್ ಆಸಿಫ್ ಹಾಗೂ ಮುಹಮ್ಮದ್ ಆಮಿರ್‌ಗೆ ಐದು ವರ್ಷಗಳ ಕಾಲ ನಿಷೇಧ ವಿಧಿಸಿತ್ತು. ಮೂವರು ಆಟಗಾರರು ಹಾಗೂ ಆಟಗಾರರ ಏಜೆಂಟ್ ಮಜೀದ್ ಬ್ರಿಟನ್‌ನಲ್ಲಿ ಜೈಲು ಸಜೆ ಅನುಭವಿಸಿದ್ದರು.

  ಐಸಿಸಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಈ ಮೂವರ ವಿರುದ್ಧ ನಿಷೇಧವನ್ನು ಹಿಂದಕ್ಕೆ ಪಡೆದಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಅರ್ಹರಿದ್ದಾರೆ ಎಂದು ಹೇಳಿತ್ತು.

ಎಪ್ರಿಲ್ 2015ರಲ್ಲಿ ನಿಷೇಧದಿಂದ ಹೊರಬಂದಿರುವ ಆಮಿರ್ ಪಾಕಿಸ್ತಾನದ ಏಕದಿನ ಹಾಗೂ ಟ್ವೆಂಟಿ-20 ತಂಡದೊಂದಿಗೆ ನ್ಯೂಝಿಲೆಂಡ್‌ಗೆ ರವಿವಾರ ಪ್ರಯಾಣ ಬೆಳೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News