×
Ad

ಬ್ರಿಸ್ಬೇನ್ ಟೆನಿಸ್ ಟೂರ್ನಿ: ಫೆಡರರ್‌ಗೆ ಶಾಕ್ ನೀಡಿದ ರಾವೊನಿಕ್‌ಗೆ ಪ್ರಶಸ್ತಿ

Update: 2016-01-10 23:12 IST

 ಬ್ರಿಸ್ಬೇನ್, ಜ.10: ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್‌ಗೆ ಆಘಾತ ನೀಡಿದ ಕೆನಡಾದ ಯುವ ಆಟಗಾರ ಮಿಲೊಸ್ ರಾವೊನಿಕ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 25ರ ಹರೆಯದ ರಾವೊನಿಕ್ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್‌ರನ್ನು 6-4, 6-4 ನೇರ ಸೆಟ್‌ಗಳ ಅಂತರದಿಂದ ಸದೆ ಬಡಿದರು. ರಾವೊನಿಕ್ ಅವರು ಫೆಡರರ್ ವಿರುದ್ಧ ಈ ತನಕ ಆಡಿರುವ 11 ಪಂದ್ಯಗಳ ಪೈಕಿ ಎರಡನೆ ಗೆಲುವು ಸಾಧಿಸಿದ್ದಾರೆ.

ಟೂರ್ನಿಯ ಪ್ರತಿ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಫೆಡರರ್ ಫೈನಲ್ ಸುತ್ತಿನಲ್ಲಿ ರಾವೊನಿಕ್ ವಿರುದ್ಧ ನಿರುತ್ತರವಾದರು. ರಾವೊನಿಕ್ ಶಕ್ತಿಶಾಲಿ ಸರ್ವ್ ಮೂಲಕ ತನಗೆ ಲಭಿಸಿದ ಎಲ್ಲ ಅವಕಾಶವನ್ನು ಬಾಚಿಕೊಂಡರು.

ಫೆಡರರ್‌ರನ್ನು ಮಣಿಸಿರುವ ರಾವೊನಿಕ್ 8ನೆ ಎಟಿಪಿ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಕಳೆದ ವರ್ಷದ ಬ್ರಿಸ್ಬೇನ್ ಫೈನಲ್‌ನಲ್ಲಿ 34ರ ಹರೆಯದ ಫೆಡರರ್‌ಗೆ ಮೂರು ಸೆಟ್‌ಗಳ ಅಂತರದಿಂದ ಸೋತಿದ್ದ ರಾವೊನಿಕ್ ಇದೀಗ ಸೇಡು ತೀರಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News