ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ 16 ಸ್ಲೆಸ್ ಸಿ.ಟಿ. ಸ್ಕಾನ್ ಕೇಂದ್ರ ಉದ್ಘಾಟನೆ

Update: 2016-01-11 18:55 GMT

ಮಂಗಳೂರು, ಜ.11: ನಗರದ ಕಂಕನಾಡಿ ಯಲ್ಲಿರುವ ಯುನಿಟಿ ಆಸ್ಪತ್ರೆಯಲ್ಲಿ 16 ಸ್ಲೆಸ್ ಸಿ.ಟಿ. ಸ್ಕಾನ್ ಕೇಂದ್ರ ಸೋಮವಾರ ಉದ್ಘಾಟನೆ ಗೊಂಡಿತು.

ಖ್ಯಾತ ಹೃದ್ರೋಗ ತಜ್ಞ ಹಾಗೂ ಹಿರಿಯ ವೈದ್ಯಕೀಯ ಸಲಹೆಗಾರ ಡಾ.ಕೆ.ವಿ.ದೇವಾಡಿಗ ಮತ್ತು ಹಿರಿಯ ವೈದ್ಯಕೀಯ ಸಲಹೆಗಾರ ನರರೋಗ ತಜ್ಞ ಡಾ.ಎ.ವಿ.ಶೆಟ್ಟಿಯವರು ನೂತನ ಕೇಂದ್ರವನ್ನು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‌ನ ಆಡಳಿತ ನಿರ್ದೇಶಕ ಡಾ.ಸಿ.ಪಿ.ಹಬೀಬ್ ರಹ್ಮಾನ್, ಯುನಿಟಿ ಆಸ್ಪತ್ರೆ 1995ರಿಂದ ಸ್ಕಾನಿಂಗ್ ಸೌಲಭ್ಯದ ಸಲಕರಣೆ ಗಳನ್ನು ಅಳವಡಿಸಿಕೊಂಡು ಬಳಿಕ ಪ್ರತಿ ಹತ್ತು ವರ್ಷಗಳಿಗೊಮ್ಮೆ ಅವುಗಳನ್ನು ಆಧುನೀ ಕರಣಗೊಳಿಸುತ್ತಾ ಬಂದಿದೆ. ಆ ಪ್ರಕಾರ 2005ರಲ್ಲಿ ಹಾಗೂ ಪ್ರಸಕ್ತ 2016ರಲ್ಲಿ ಹೊಸ ಉಪಕರಣಗಳ ಅಳವಡಿಕೆ ಮಾಡಲಾಗಿದೆ. 16 ಸ್ಲೆಸ್ ಸಿ.ಟಿ. ಸ್ಕಾನ್ ಯಂತ್ರದಿಂದ 3ಡಿ ಇಮೇಜಿನ ಸ್ಪಷ್ಟಚಿತ್ರಣ ಪಡೆಯಲು ಸಾಧ್ಯ. ಈ ಉಪಕರಣದಿಂದ ಶ್ವಾಸಕೋಶದ, ಹೃದಯದ ಸಮಸ್ಯೆಗಳ, ಕಿಡ್ನಿಯ ಕಡಿಮೆ ರೇಡಿಯೇಶನ್ ಮೂಲಕ ಉತ್ತಮ ಗುಣಮಟ್ಟದ ಚಿತ್ರಗಳನ್ನು ಪಡೆಯಲು ಸಾಧ್ಯ.‘16 ಸ್ಲೆಸ್ ಸಿಟಿ ಸ್ಕಾನ್’ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ ಎಂದವರು ತಿಳಿಸಿದರು.

 ಡಾ.ಎ.ವಿ.ಶೆಟ್ಟಿ ವೈದ್ಯಕೀಯ ಕ್ಷೇತ್ರದ ತಮ್ಮ ಅನುಭವವನ್ನು ಹಂಚಿಕೊಂಡರು.ಡಾ.ಅಶಾಕ್ ಮುಹಮ್ಮದ್ ಸ್ವಾಗತಿಸಿದರು. ಆಸ್ಪತ್ರೆಯ ಸಾರ್ವ ಜನಿಕ ಸಂಪರ್ಕ ಅಕಾರಿ ದೇವರಾಜ್ ವಂದಿಸಿ ದರು. ನಾಝಿಯಾ ಕಾರ್ಯಕ್ರಮ ನಿರೂಪಿಸಿದರು. ಡಾ.ಅಜ್ಮಲ್ ಹಬೀಬ್ ರಹ್ಮಾನ್ ಹಾಗೂ ಆಸ್ಪತ್ರೆಯ ಇತರ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News