ನೆಲವ ಬಿಟ್ಟ ದೋಣಿ ನೀರು ಸೇರಿತು...!

Update: 2016-01-11 18:56 GMT

ಉಡುಪಿ, ಜ.11: ಹಾವಂಜೆ ಗ್ರಾಪಂ ಸದಸ್ಯರು ಹಾಗೂ ಊರಿನ ಕೆಲವರ ನಡುವಿನ ರಾಜಕೀಯ ಮೇಲಾಟಗಳಿಂದ ಕಳೆದ 10 ದಿನಗಳಿಂದ ಉಡುಪಿ ತಾಲೂಕು ಕಚೇರಿ ಆವರಣದಲ್ಲಿ ಬಿದ್ದಿದ್ದ ಜಿಲ್ಲಾ ಪ್ರಕೃತಿ ವಿಕೋಪ ನಿಯಡಿ ನಿರ್ಮಾಣಗೊಂಡ ೈಬರ್ ದೋಣಿ ಕೊನೆಗೂ ಇಂದು ಗ್ರಾಪಂಗೆ ಹಸ್ತಾಂತರಗೊಂಡು ಸಾರ್ವಜನಿಕರ ಉಪಯೋಗ ಕ್ಕಾಗಿ ಸ್ವರ್ಣಾ ನದಿಯ ನೀರಿಗೆ ಇಳಿಯಿತು. ಹಾವಂಜೆ ಗ್ರಾಮದ ಕೀಳಿಂಜೆಯ ತ್ರಿವರ್ಣ ವಿಶ್ವ ವೇದಿಕೆಯ ಸತತ ಪ್ರಯತ್ನದ ಲವಾಗಿ ಶಾಸಕರು, ಜಿಲ್ಲಾಕಾರಿ, ತಹಶೀಲ್ದಾರ್‌ರ ಒಪ್ಪಿಗೆ ಯೊಂದಿಗೆ ಗ್ರಾಮದ ಜನರ ಬಳಕೆಗಾಗಿ ಜಿಲ್ಲಾ ಪ್ರಕೃತಿ ವಿಕೋಪ ನಿಯಡಿ ದೋಣಿಯನ್ನು ನಿರ್ಮಿಸಿ ಗ್ರಾಪಂಗೆ ಹಸ್ತಾಂತರವಾಗಬೇಕಿತ್ತು. ಹೊಸ ವರ್ಷದ ದಿನವಾದ ಜ.1ರಂದು ರಾತ್ರಿ ದೋಣಿಯ ಹಸ್ತಾಂತರಕ್ಕಾಗಿ ಶಾಸಕ ಪ್ರಮೋದ್ ಮದ್ವರಾಜ್ ಅಧ್ಯಕ್ಷತೆಯಲ್ಲಿ ಆಯೋಜಿತವಾದ ಕಾರ್ಯಕ್ರಮಕ್ಕೆ ಗ್ರಾಪಂನ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒಗಳೆಲ್ಲ ಗೈರು ಹಾಜರಾಗಿ ಹಸ್ತಾಂತರ ಕಾರ್ಯಕ್ರಮವೇ ನನೆಗುದಿಗೆ ಬಿದ್ದಿತ್ತು.

 

 

 

ಇದೀಗ ಕಾರ್ಯನಿರ್ವಹಣಾಕಾರಿಗಳು ಪಿಡಿಒ ಹಾಗೂ ಹಾವಂಜೆ ಗ್ರಾಪಂ ಅಧ್ಯಕ್ಷರ ಮೂಲಕ ಇಂದು ದೋಣಿಯನ್ನು ಹಾವಂಜೆ ಗ್ರಾಪಂಗೆ ಅಕೃತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೋಣಿಯನ್ನು ಸ್ವಾಗತಿಸಲು ತ್ರಿವರ್ಣ ವಿಶ್ವವೇದಿಕೆ ಅಧ್ಯಕ್ಷರಾದ ಸತೀಶ್ ಪೂಜಾರಿ ಕೀಳಿಂಜೆ ಹಾಗೂ ಊರವರು ಉಪಸ್ಥಿತರಿದ್ದರು. ಮಹಿಳೆಯರು ಆರತಿ ಬೆಳಗುವ ಮೂಲಕ ದೋಣಿಗೆ ಸ್ವಾಗತ ಕೋರಿದರು. ಇದೇ ವೇಳೆ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಬಿಗ ತಿಮ್ಮಪ್ಪ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜಯ ಶೆಟ್ಟಿ ಬನ್ನಂಜೆ, ಸಾಧು ಪೂಜಾರಿ ಕೀಳಿಂಜೆ, ಶಶಿ ಪೂಜಾರಿ ಕೀಳಂಜೆ, ಪದ್ಮ ಶೆಟ್ಟಿ, ಅಕ್ಕಯ್ಯ ಪೂಜಾರಿ, ಸುಧಾಕರ ಪೂಜಾರಿ ಕೀಳಂಜೆ, ಸದಾನಂದ ಪೂಜಾರಿ, ್ರಾಂಕಿ ಡಿಸೋಜ, ಸತೀಶ್ ಶೆಟ್ಟಿ ಬಾಣಬೆಟ್ಟು ಕೀಳಂಜೆ, ಗಣೇಶ್ ರಾಜ್ ಸರಳೇಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

ಇದರಿಂದ ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಅನಿವಾರ್ಯವಾಗಿ ದೋಣಿಯನ್ನು ಅಲ್ಲಿಂದ ತಂದು ತಾಲೂಕು ಕಚೇರಿ ಆವರಣದಲ್ಲಿ ಮರದ ಕೆಳಗೆ ಇರಿಸಿದ್ದರು. ಈ ಕುರಿತು ‘ವಾರ್ತಾಭಾರತಿ’ ಜ.8ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿದ ಬಳಿಕ ತಹಶೀಲ್ದಾರ್ ಸಮಸ್ಯೆ ಬಗೆಹರಿ ಸುವ ಜವಾಬ್ದಾರಿಯನ್ನು ತಾಪಂನ ಕಾರ್ಯ ನಿರ್ವ ಹಣಾಕಾರಿ ಜೆ.ಸಿ.ಜನಾರ್ದನ್‌ರಿಗೆ ಒಪ್ಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News