ಚರ್ಮದ ಕ್ಯಾನ್ಸರ್ ಪತ್ತೆಹಚ್ಚಲು ನೂತನ ರಕ್ತಪರೀಕ್ಷೆ
ನ್ಯೂಯಾರ್ಕ್, ಜ. 12: ಚರ್ಮದ ಕ್ಯಾನ್ಸರ್‌ಗಳ ಪೈಕಿ ಅತ್ಯಂತ ಆಕ್ರಮಣಕಾರಿ ಸ್ವರೂಪದ ‘ಮೆಟಸ್ಟಾಟಿಕ್ ಮೆಲನೋಮ’ವನ್ನು ನಿಕಟವಾಗಿ ಗುರುತಿಸಬಲ್ಲ ನೂತನ ರಕ್ತ ಪರೀಕ್ಷೆಯೊಂದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಸತ್ತ ಕ್ಯಾನ್ಸರ್ ಕೋಶಗಳಿಂದ ಪಡೆದ ಡಿಎನ್‌ಎ ತುಣುಕುಗಳ ರಕ್ತದ ಮಟ್ಟಗಳ ಮೇಲೆ ನಿಗಾ ಇಡುವ ಪರೀಕ್ಷೆಯು, ಚರ್ಮದ ಕ್ಯಾನ್ಸರ್‌ನ ತೀವ್ರತೆ ಮತ್ತು ಸಂಭಾವ್ಯ ಹರಡುವಿಕೆಯನ್ನು ಗುರುತಿಸಲು ನೆರವಾಗುತ್ತದೆ ಎಂದು ಅಧ್ಯಯನ ಪತ್ತೆಹಚ್ಚಿದೆ.
‘‘ಸರ್ಕ್ಯುಲೇಟಿಂಗ್ ಟ್ಯೂಮರ್ ಡಿಎನ್‌ಎ ಎನ್ನುವುದು ‘ಮೆಟಸ್ಟಾಟಿಕ್ ಮೆಲನೋಮ’ದ ತೀವ್ರತೆಯನ್ನು ಅಂದಾಜಿಸುವ ಹಾಗೂ ಅದರ ಹರಡುವಿಕೆಯ ಮೇಲೆ ನಿಗಾ ಇಡುವ ಅತ್ಯುತ್ತಮ ರಕ್ತ ಪರೀಕ್ಷೆಯಾಗಿದೆ ಎಂಬುದನ್ನು ನಮ್ಮ ಅಧ್ಯಯನ ತೋರಿಸುತ್ತದೆ’’ ಎಂದು ನ್ಯೂಯಾರ್ಕ್‌ನ ಎನ್‌ವೈಯು ಲ್ಯಾಂಗೋನ್ ಮೆಡಿಕಲ್ ಸೆಂಟರ್‌ನಲ್ಲಿ ಚರ್ಮ ತಜ್ಞರಾಗಿರುವ ಡೇವಿಡ್ ಪೊಲ್ಸ್ಕಿ ಹೇಳುತ್ತಾರೆ.
ಸಣ್ಣ ಗಡ್ಡೆಗಳಿರುವ ರೋಗಿಗಳಲ್ಲಿ ಈ ಪರೀಕ್ಷೆ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.