ರತ್ಲಮ್‌ನಿಂದ ಬ್ರಿಬಾಡ್‌ಗೆ ಎತ್ತಿನ ಗಾಡಿ ಪ್ರಯಾಣ ; ಇಂದೋರ್-ದಿಲ್ಲಿ ವಿಮಾನಕ್ಕಿಂತಲೂ ದುಬಾರಿ !
ಇಂದೋರ್, ಜ.13: ಇಲ್ಲಿನ ರತ್ಲಮ್‌ನಿಂದ ಬಿಬ್ರಾಡ್‌ನ ಜೈನ್ ದೇವಸ್ಥಾನ ಆರು ಕಿ.ಮಿ. ದೂರದಲ್ಲಿದೆ. ಆದರೆ ಈ ದೇವಸ್ಥಾನಕ್ಕೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ರತ್ಲಮ್‌ನಿಂದ ದಿಲ್ಲಿಗೆ ಎತ್ತಿನ ಗಾಡಿಯ ಮೂಲಕ ಪ್ರಯಾಣಿಸಲು 6 ಸಾವಿರ ರೂ. ನೀಡಬೇಕಾಗಿದೆ. ಇಂದೋರ್-ದಿಲ್ಲಿ ನಡುವೆ ವಿಮಾನದಲ್ಲಿ ಪ್ರಯಾಣಿಸುವುದಕ್ಕಿಂತಲೂ ಇದು ದುಬಾರಿಯಾಗಿದೆ.
ಪೌಷ ಮಾಸದ ಅಮವಾಸ್ಯೆಯ ದಿನ ಬಿಬ್ರಾಡ್‌ನ ಜೈನ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಜನವರಿ 9ರಂದು ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ರತ್ಲಮ್ ಮತ್ತು ಮಧ್ಯಪ್ರದೇಶದಿಂದ 30,000 ರಿಂದ 40,000 ಮಂದಿ ಭಾಗವಹಿಸಿದ್ದಾರೆ.
ಪ್ರತಿ ವರ್ಷ ಕಾರ್ಯಕ್ರಮದ ಒಂದು ತಿಂಗಳ ಮೊದಲೆ ಇಲ್ಲಿಗೆ ತೆರಳುವವರು ಎತ್ತಿನ ಗಾಡಿಯನ್ನು ಕಾಯ್ದಿರಿಸುತ್ತಾರೆ. ಸಣ್ಣಗಾಡಿಗೆ 2ಸಾವಿರ ರೂ. ಹಾಗೂ ದೊಡ್ಡ ಗಾಡಿಗೆ 5 ಸಾವಿರದಿಂದ 8 ಸಾವಿರ ರೂ.ತನಕ ಮುಂಗಡ ಪಾವತಿಸಬೇಕಾಗಿದೆ.
ದೊಡ್ಡ ಗಾಡಿಗೆ ದೇವಸ್ಥಾನಕ್ಕೆ ತೆರಳುವ ಭಕ್ತರಲ್ಲಿ ಸ್ವಂತ ಬೈಕ್ ,ಕಾರು ವಾಹನಗಳಿದ್ದರೂ ಅವರು ಅದರಲ್ಲಿ ತೆರಳುವುದಿಲ್ಲ. ಯಾಕೆಂದರೆ ಎತ್ತಿನ ಗಾಡಿಯಲ್ಲಿ ದೇವಸ್ಥಾನಕ್ಕೆ ತೆರಳಿದರೆ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಎಲ್ಲ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಈ ಕಾರಣಕ್ಕಾಗಿ ಉತ್ತವ ದಿನದಂದು ಎತ್ತಿನ ಗಾಡಿಗೆ ಭಾರೀ ಬೇಡಿಕೆ.
ರತ್ಲಮ್‌ನಲ್ಲಿ 500ರಿಂದ 550 ಎತ್ತಿನ ಗಾಡಿಗಳು ದಿನನಿತ್ಯ ಸಂಚಾರ ಸೇವೆಯಲ್ಲಿ ನಿರತವಾಗಿದೆ. ಎತ್ತಿನ ಗಾಡಿ ಮಾಲಕರು ದಿನವೊಂದಕ್ಕೆ 8,000ರೂ. ನಿಂದ 12,000ರೂ. ತನಕ ಸಂಪಾದನೆ ಮಾಡುತ್ತಾರೆ. ಗಾಡಿ ಮಾಲಕರು ದಿನದಲ್ಲಿ 12 ಕಿ.ಮಿ.ಗಿಂತ ಹೆಚ್ಚು ಗಾಡಿಯನ್ನು ಓಡಿಸುವುದಿಲ್ಲ. ಎತ್ತಿನ ಗಾಡಿಯ ಮಾಲಕರಲ್ಲಿ ಬಹುತೇಕ ಮಂದಿ ರೈತರಾಗಿರುತ್ತಾರೆ.