ಮಾಯಾ ಕಾಲು ಹಿಡಿದ ಫೋಟೊವನ್ನು ಫೇಸ್‌ಬುಕ್‌ಗೆ ರವಾನಿಸಿದ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆ !
ಅಲಿಘಡ, ಜ.13: ಬಿಎಸ್‌ಪಿ ಅಧಿ ನಾಯಕಿ ಮಾಯಾವತಿಯ ಪಾದಮುಟ್ಟಿ ನಮಸ್ಕರಿಸಿದ ಫೋಟೊವನ್ನು ಫೇಸ್ ಬುಕ್‌ನಲ್ಲಿ ಹಾಕಿದ ಅಭ್ಯರ್ಥಿಯೊಬ್ಬರಿಗೆ ಬಿಎಸ್‌ಪಿಯು ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ ವಿಚಾರ ಬೆಳಕಿಗೆ ಬಂದಿದೆ.
2017ರ ವಿಧಾನಸಭಾ ಚುನಾವಣೆಗೆ ಅತ್ರಾವಳಿ ಕ್ಷೇತ್ರಕ್ಕೆ ಸಂಗೀತ ಚೌಧರಿಯನ್ನು ಬಿಎಸ್‌ಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ಆಕೆ ಈ ಖುಶಿಯಲ್ಲಿ ತನ್ನ ಮಕ್ಕಳೊಂದಿಗೆ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿಯನ್ನು ಭೇಟಿಯಾಗಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಅಷ್ಟು ಮಾತ್ರವಲ್ಲಿ ಮಾಯಾವತಿಯ ಚರಣಕ್ಕೆ ಎರಗಿದ ಫೋಟೋವನ್ನು ಫೇಸ್‌ಬುಕ್‌ಗೆ ಕಳುಹಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಸಂಗೀತ ಚೌಧರಿ ಅವರ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಸ್‌ಪಿ ಆಕೆಗೆ ಟಿಕೆಟ್ ನಿರಾಕರಿಸಿದೆ. ಅಶಿಸ್ತಿನಿಂದ ನಡೆದುಕೊಂಡ ಕಾರಣಕ್ಕಾಗಿ ಸಂಗೀತ ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಅರವಿಂದ್ ಆದಿತ್ಯ ತಿಳಿಸಿದ್ದಾರೆ.
ಸಂಗೀತ ಪತಿ ಧರ್ಮೆಂದ್ರ ಚೌದರಿ ಈ ಮೊದಲು ಅತ್ರಾವಳಿ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದರು. ಆದರೆ 2015 ಜನವರಿಯಲ್ಲಿ ಧರ್ಮೆಂದ್ರ ಚೌದರಿ ಕೊಲೆ ಪ್ರಕರಣದಲ್ಲಿ ಸಿಲುಕೊಂಡ ಹಿನ್ನೆಲೆಯಲ್ಲಿ ಆತನ ಪತ್ನಿ ಸಂಗೀತ ಚೌಧರಿಗೆ ಟಿಕೆಟ್ ನೀಡುವ ಬಗ್ಗೆ ಬಿಎಸ್‌ಪಿ ನಿರ್ಧಾರ ಕೈಗೊಂಡಿತ್ತು.