×
Ad

ಉಗ್ರರ ಸುರಕ್ಷಿತ ತಾಣಗಳ ಪಟ್ಟಿಯಲ್ಲಿ ಪಾಕಿಸ್ತಾನ : ಒಬಾಮ

Update: 2016-01-13 23:44 IST

ವಾಶಿಂಗ್ಟನ್, ಜ. 13: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಅಸ್ಥಿರತೆಯು ದಶಕಗಳ ಕಾಲ ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
‘‘ಅಲ್ ಖಾಯಿದ ಮತ್ತು ಈಗ ಐಸಿಸ್ ನಮ್ಮ ಜನರಿಗೆ ನೇರ ಬೆದರಿಕೆಯೊಡ್ಡಿವೆ. ಯಾಕೆಂದರೆ, ತಮ್ಮ ಸ್ವಂತ ಜೀವ ಸೇರಿದಂತೆ ಮಾನವ ಜೀವಕ್ಕೆ ಬೆಲೆ ಕೊಡದ ಬೆರಳೆಣಿಕೆಯಷ್ಟು ಭಯೋತ್ಪಾದಕರೂ ಭಾರೀ ಅಪಾಯವನ್ನು ಉಂಟುಮಾಡಬಲ್ಲರು’’ ಎಂದು ಅಮೆರಿಕದ ಕಾಂಗ್ರೆಸ್‌ನಲ್ಲಿ ಮಾಡಿದ ಕೊನೆಯ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣದಲ್ಲಿ ಅವರು ಹೇಳಿದರು.

‘‘ನಮ್ಮ ವಿದೇಶ ನೀತಿಯು ಐಸಿಸ್ ಮತ್ತು ಅಲ್-ಖಾಯಿದ ಒಡ್ಡಿದ ಬೆದರಿಕೆಯನ್ನು ಗಮನದಲ್ಲಿರಿಸಬೇಕು. ಆದರೆ, ಅದು ಅಲ್ಲೇ ನಿಲ್ಲಬಾರದು. ಐಸಿಸ್ ಇಲ್ಲದೆಯೂ ಮಧ್ಯ ಪ್ರಾಚ್ಯ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ, ಮಧ್ಯ ಅಮೆರಿಕ, ಆಫ್ರಿಕ ಮತ್ತು ಏಶ್ಯದ ಭಾಗಗಳು ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಅಸ್ಥಿರತೆ ದಶಕಗಳ ಕಾಲ ಮುಂದುವರಿಯುತ್ತದೆ. ಇವುಗಳ ಪೈಕಿ ಕೆಲವು ಸ್ಥಳಗಳು ಹೊಸ ಭಯೋತ್ಪಾದಕ ಜಾಲಗಳಿಗೆ ಸುರಕ್ಷಿತ ಆಶ್ರಯ ತಾಣಗಳಾಗಿರುತ್ತವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News