ಆಸ್ಟ್ರೇಲಿಯನ್ ಓಪನ್: ಶರಪೋವಾ ಫಿಟ್
Update: 2016-01-13 23:50 IST
ಮೆಲ್ಬೋರ್ನ್, ಜ.13: ರಶ್ಯದ ಸ್ಟಾರ್ ಆಟಗಾರ್ತಿ ಮರಿಯಾ ಶರಪೋವಾ ಮುಂದಿನ ವಾರ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ಗೆ ಸಂಪೂರ್ಣ ಫಿಟ್ ಇರುವುದಾಗಿ ಘೋಷಿಸಿದ್ದಾರೆ.
ವಿಶ್ವದ ನಂ.5ನೆ ಆಟಗಾರ್ತಿ ಶರಪೋವಾಗೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಕಳೆದ ವಾರ ನಡೆದ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಅವರು ಸೋಮವಾರ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಯಿಂದ ಹೊರಗುಳಿಯುವ ಭೀತಿ ಎದುರಿಸಿದ್ದರು.
2008ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಹಾಗೂ ಕಳೆದ ವರ್ಷದ ರನ್ನರ್ಸ್ ಅಪ್ ಆಗಿರುವ ಶರಪೋವಾರ ಪ್ರಾಕ್ಟಿಸ್ ನಡೆಸುವ ಉದ್ದೇಶದಿಂದ ಮೆಲ್ಬೋರ್ನ್‌ಗೆ ಬೇಗನೆ ಆಗಮಿಸಿದ್ದರು.
ಗಾಯದ ಸಮಸ್ಯೆ ನನಗೆ ಸ್ವಲ್ಪ ಅಡ್ಡಿಯಾಗಿದೆ.ಆದರೆ, ಕಳೆದ ಮೂರು ದಿನಗಳಿಂದ ನನ್ನ ಆರೋಗ್ಯ ಸುಧಾರಿಸಿದೆ ಎಂದು ಶರಪೋವಾ ಪ್ರತಿಕ್ರಿಯಿಸಿದ್ದಾರೆ.