×
Ad

ಕಾಶ್ಮೀರದಲ್ಲಿ ನಡುಗಿದ ಭೂಮಿ

Update: 2016-01-13 23:57 IST

ಶ್ರೀನಗರ,ಜ.13: ಕಾಶ್ಮೀರದಲ್ಲಿ ಬುಧವಾರ ನಸುಕಿನಲ್ಲಿ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ,ಆದರೆ ಯಾವುದೇ ಹಾನಿಯಾಗಿರುವುದು ವರದಿಯಾಗಿಲ್ಲ.
ನಸುಕಿನ 1:35ರ ಸುಮಾರಿಗೆ ಭೂಮಿಯು ನಡುಗಿದ್ದು,ಗಾಢನಿದ್ರೆಯಲ್ಲಿದ್ದ ಜನರು ಜೀವಭಯದಿಂದ ಮನೆಗಳಿಂದ ಹೊರಗೋಡುವಂತಾಗಿತ್ತು. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.8ರಷ್ಟಿದ್ದು,ಕೇಂದ್ರಬಿಂದು ಅಫಘಾನಿಸ್ತಾನದ ಹಿಂದುಕುಷ್ ಪ್ರದೇಶದಲ್ಲಿ 220 ಕಿ.ಮೀ.ಆಳದಲ್ಲಿತ್ತು ಎಂದು ಹವಾಮಾನ ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News