×
Ad

ಎಡಿಎಂಕೆ ಸಭೆಯ ಸ್ಥಳದಲ್ಲಿ ನಾಲ್ಕು ಬಾಂಬ್‌ಗಳು ಪತ್ತೆ

Update: 2016-01-13 23:59 IST


 ಮದುರೈ,ಜ.13: ಮಂಗಳವಾರ ರಾತ್ರಿ ಇಲ್ಲಿಯ ಜೈಹಿಂದ್‌ಪುರಂನಲ್ಲಿ ಎಡಿಎಂಕೆ ಆಯೋಜಿಸಿದ್ದ ಸಭೆಯ ಸ್ಥಳದಲ್ಲಿ ಎರಡು ನಾಡಬಾಂಬ್‌ಗಳು ಮತ್ತು ಎರಡು ಪೆಟ್ರೋಲ್ ಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ಇಂದು ತಿಳಿಸಿದರು. ಎರಡು ಬಾಂಬ್‌ಗಳು ಸಭೆ ಆರಂಭಗೊಳ್ಳುವ ಮುನ್ನ ಪತ್ತೆಯಾಗಿದ್ದರೆ,ಇನ್ನೆರಡು ಬಾಂಬ್‌ಗಳು ಸಭೆಯ ಬಳಿಕ ಪತ್ತೆಯಾಗಿವೆ. ಯಾವುದೇ ಬಾಂಬ್ ಸ್ಫೋಟಿಸಿಲ್ಲ ಎಂದರು.
ರವಿವಾರವಷ್ಟೇ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡು ಸಚಿವ ಸೆಲ್ಲುರು ಕೆ.ರಾಜು ಮತ್ತು ಡಿಎಂಕೆಯ ಇಲ್ಲಿಯ ಕಚೇರಿಗಳ ಮೇಲೆ ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿತ್ತು. ಈ ಘಟನೆಗಳಲ್ಲಿ ಯಾರೂ ಗಾಯಗೊಂಡಿರಲಿಲ್ಲ. ನಿನ್ನೆಯ ಸಭೆಯನ್ನು ರಾಜು ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News