×
Ad

ಜಕಾರ್ತದ ವಿಶ್ವಸಂಸ್ಥೆ ಕಚೇರಿ ಬಳಿ ಸರಣಿ ಬಾಂಬ್‌ ಸ್ಫೋಟ;7 ಸಾವು

Update: 2016-01-14 11:00 IST


  ಜಕಾರ್ತ, ಜ.14: ಸೆಂಟ್ರಲ್‌ ಜಕಾರ್ತದಲ್ಲಿರುವ ವಿಶ್ವಸಂಸ್ಥೆ ಕಚೇರಿ  ಸಮೀಪ ಸರಣಿ ಬಾಂಬ್‌ ಸ್ಫೋಟಗೊಂಡ ಪರಿಣಾಮವಾಗಿ ಏಳು ಮಂದಿ ಸಾವಿಗೀಡಾಗಿದ್ಧಾರೆ.
 ಪ್ರಸಿದ್ಧ ಶಾಪಿಂಗ್‌ ಮಾಲ್‌ ಸಾರಿನಾದಲ್ಲಿ ಮೊದಲು ಭಾರೀ ಬಾಂಬ್‌ ಸ್ಫೋಟ ಸಂಭವಿಸಿದ್ದು,. ವಿಶ್ವ ಸಂಸ್ಥೆಯ ಕಚೇರಿ ಮುಂದೆ ಓರ್ವ ಮಾನವ ಬಾಂಬರ್‌ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಒಟ್ಟು ಏಳು  ಕಡೆ ಬಾಂಬ್‌ ಸ್ಫೋಟಗೊಂಡ ಬಗ್ಗೆ ವರದಿಯಾಗಿದೆ.
   ಉಗ್ರರು ಅಲ್ಲಲ್ಲಿ ಬಾಂಬ್‌ ಇರಿಸಿ ಕೆಫೆಯೊಂದರಲ್ಲಿ ಅಡಗಿದ್ದಾರೆ. ಒಟ್ಟು 14  ಮಂದಿ ಉಗ್ರರು ಇದ್ದಾರೆ ಎಂದು  ತಿಳಿದು ಬಂದಿದೆ.
ಸಾರಿನಾ ಶಾಪಿಂಗ್‌ ಮಾಲ್‌  ಹತ್ತಿರ ರಾಯಭಾರಿ ಕಚೇರಿ, ಸರಕಾರಿ ಕಚೇರಿ, ಹಲವು ಹೋಟೆಲ್‌ಗಳು, ಅಂಗಡಿ  ಮುಂಗಟ್ಟುಗಳು ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News