ಟರ್ಕಿಯಲ್ಲಿ ಕಾರ್ ಬಾಂಬ್ ಸ್ಫೋಟ; ಆರು ಸಾವು
Update: 2016-01-14 12:40 IST
ಇಸ್ತಾಂಬುಲ್, ಜ.14: ಆಗ್ನೇಯ ಟರ್ಕಿಯ ದಿಯಾರ್ಬಕಿರ್ ಪ್ರಾಂತ್ಯದ ಸಿನಾರ್ ಪಟ್ಟಣದ ಪೊಲೀಸ್ ಠಾಣೆಯೊಂದನ್ನು ಗುರಿಯಾಗಿರಿಸಿ ನಡೆದ ಕಾರುಬಾಂಬ್ ದಾಳಿಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು 39 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
. ಯಾವುದೇ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಉಗ್ರಗಾಮಿಗಳು ಈ ಕೃತ್ಯ ನಡೆಸಿದ್ದಾರೆಂದು ಶಂಕಿಸಲಾಗಿದೆ. ಬಾಂಬಾ ಸ್ಫೋಟದಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.