×
Ad

ಭಾರತೀಯರು ಅತ್ಯಂತ ದೊಡ್ಡ ವಲಸಿಗ ಸಮುದಾಯ

Update: 2016-01-14 23:35 IST

ವಿಶ್ವಸಂಸ್ಥೆ, ಜ. 14: 24.4 ಕೋಟಿ ಜನರು ಅಥವಾ ವಿಶ್ವದ ಜನಸಂಖ್ಯೆಯ ಶೇ. 3.3 ಮಂದಿ ತಾವು ಹುಟ್ಟಿದ ದೇಶವಲ್ಲದ ಇನ್ನೊಂದು ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ತಿಳಿಸಿದೆ.
ಅವರ ಸಂಖ್ಯೆಯು ವೇಗವಾಗಿ ಬೆಳೆಯುತ್ತಿದ್ದು, ಇದು ಅವರ ಹುಟ್ಟಿದ ಹಾಗೂ ವಾಸಿಸುವ ದೇಶಗಳ ಮೇಲೆ ಗಂಭೀರ ಆರ್ಥಿಕ, ಸಾಮಾಜಿಕ ಮತ್ತು ಜನಸಂಖ್ಯಾ ಅಡ್ಡ ಪರಿಣಾಮಗಳನ್ನು ಬೀರಿವೆ.
ಆದಾಗ್ಯೂ, ಅವರು ಕೇವಲ 20 ದೇಶಗಳಲ್ಲಿ ನೆಲೆಸಿದ್ದಾರೆ.
2015ರಲ್ಲಿ ವಲಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು ಅಮೆರಿಕ. ನಂತರದ ಸ್ಥಾನಗಳಲ್ಲಿ ಬರುವುದು ಜರ್ಮನಿ, ರಶ್ಯ ಮತ್ತು ಸೌದಿ ಅರೇಬಿಯ. ಆದರೆ, ಈ ಪಟ್ಟಿ ದೇಶದ ಜನಪ್ರಿಯತೆಯನ್ನು ಸೂಚಿಸುತ್ತದೆ ಎಂದು ಪರಿಗಣಿಸಲಾಗದು. ಸೌದಿ ಅರೇಬಿಯ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಅಲ್ಲಿ ಅಗಾಧ ಸಂಖ್ಯೆಯ ವಲಸಿಗ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಮೆರಿಕದಂತೆ ಅಲ್ಲಿ ಶಾಶ್ವತವಾಗಿ ನೆಲೆಸುವ ವಲಸಿಗರಿಲ್ಲ.
ಸುಮಾರು 1.6 ಕೋಟಿ ಭಾರತೀಯರು ವಿಶ್ವಾದ್ಯಂತ ಚದುರಿ ಹೋಗಿದ್ದು, ಅತ್ಯಂತ ದೊಡ್ಡ ವಲಸಿಗ ಸಮುದಾಯವಾಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News