ಭಾರತೀಯ ವೃದ್ಧನಿಗೆ ಹಲ್ಲೆ: ಪೊಲೀಸ್ ಖುಲಾಸೆ
ಅಲಬಾಮ, ಜ. 14: ಅಮೆರಿಕದ ಅಲಬಾಮದಲ್ಲಿ ಗುಜರಾತ್‌ನ ವ್ಯಕ್ತಿಯೊಬ್ಬರನ್ನು ನೆಲಕ್ಕೆ ಕೆಡವಿ ಅವರು ಆಂಶಿಕ ಪಾರ್ಶ್ವವಾಯುವಿಗೊಳಗಾಗುವಂತೆ ಮಾಡಿದ ಪೊಲೀಸ್ ಅಧಿಕಾರಿಯೊಬ್ಬರನ್ನು ಖುಲಾಸೆಗೊಳಿಸಲಾಗಿದೆ.
58 ವರ್ಷದ ಸುರೇಶ್‌ಭಾಯ್ ಪಟೇಲ್ ಅಮೆರಿಕದಲ್ಲಿರುವ ತನ್ನ ಮಗ ಚಿರಾಗ್ ಪಟೇಲ್, ಸೊಸೆ ಮತ್ತು ಅವರ ಹೊಸದಾಗಿ ಜನಿಸಿದ ಮಗುವನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ನೋಡಲು ಹೋಗಿದ್ದರು.
ಒಂದು ದಿನ ಅವರು ಮನೆಯ ಹೊರಗೆ ನಡೆದಾಡುತ್ತಿದ್ದಾಗ, ಸ್ಥಳೀಯ ನಿವಾಸಿಯೊಬ್ಬರು ತಾನು ‘‘ಶಂಕಿತ ವ್ಯಕ್ತಿ’’ಯೊಬ್ಬನನ್ನು ನೋಡಿರುವುದಾಗಿ ಪೊಲೀಸರಿಗೆ ಫೋನ್ ಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸ್ ಅಧಿಕಾರಿ ಎರಿಕ್ ಪಾರ್ಕರ್ ಪಟೇಲ್‌ರನ್ನು ತಡೆದು ಮುಖ ಕೆಳಗಾಗಿ ನೆಲಕ್ಕೆ ಕೆಡವಿದರು.
ಪೊಲೀಸ್ ವಾಹನದಲ್ಲಿದ್ದ ಕ್ಯಾಮರಗಳಲ್ಲಿ ಈ ಘಟನೆ ದಾಖಲಾಯಿತು.
ಪಟೇಲ್‌ರ ಬಳಿ ಆಯುಧವಿರಲಿಲ್ಲ. ಅವರು ಕೆಳಗೆ ಬಿದ್ದಾಗ ಅವರ ಬೆನ್ನು ಮೂಳೆಗೆ ಗಾಯವಾಯಿತು.
ಪಟೇಲ್‌ರ ಚಹರೆ ಮತ್ತು ವರ್ತನೆಗಳು ಓರ್ವ ಕಳ್ಳನ ಚಹರೆ ಮತ್ತು ವರ್ತನೆಗಳನ್ನು ಹೋಲುತ್ತಿದ್ದವು ಹಾಗೂ ಅವರು ನಡೆಯುತ್ತಲೇ ಇದ್ದರು ಮತ್ತು ಪೊಲೀಸ್ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ ಎಂದು ಪಾರ್ಕರ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು