×
Ad

ಸ್ವರ್ಣಮಂದಿರದಲ್ಲಿ ನಿಗೂಢ ಗುಂಡೆಸೆತ: ಸೇವಾದಾರ್‌ಗೆ ಗಾಯ

Update: 2016-01-14 23:52 IST


   ಹೊಸದಿಲ್ಲಿ,ಜ,.14: ಸಿಖ್ಖರ ಪವಿತ್ರ ಯಾತ್ರಾಸ್ಥಳ ಅಮೃತಸರದ ಸುವರ್ಣ ಮಂದಿರದೊಳಗೆ ಸೇವಾದಾರ್ (ಉದ್ಯೋಗಿ) ಒಬ್ಬಾತ ನಿಗೂಢ ಗುಂಡೆಸೆತದಿಂದ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಸೇವಾದಾರ್ ಮಂದಿರದ ಪರಿಕ್ರಮದಲ್ಲಿ ನಿಂತುಕೊಂಡಿದ್ದಾಗ ಆತನ ಎದೆಭಾಗಕ್ಕೆ ನಿಗೂಢ ಬುಲೆಟೊಂದು ಹಾದುಹೋಗಿದೆ. ಆದರೆ ಸೇವಾದಾರ್ ಗುರುಪ್ರೀತ್ ಜಾಕೆಟ್ ಧರಿಸಿದ್ದರಿಂದ, ಅದೃಷ್ಟವಶಾತ್ ಬುಲೆಟ್ ಆತನ ಎದೆಯ ಹೊರಭಾಗಕ್ಕೆ ಮಾತ್ರವೇ ತಾಗಿತು.
ನಿಗೂಢ ಗುಂಡೆಸೆತದ ಘಟನೆಯು ಸ್ಥಳದಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿತು.ಸ್ವರ್ಣಮಂದಿರದಲ್ಲಿ ಸಾವಿರಾರು ಯಾತ್ರಿಕರು ಜಮಾಯಿಸಿದ್ದಾಗಲೇ ಈ ಗುಂಡೆಸೆತ ನಡೆದಿದೆ.
   ದೇಗುಲದ ಆವರಣದಲ್ಲಿ ಬಿದ್ದಿದ್ದ ಬುಲೆಟನ್ನು ಸ್ಥಳದಲ್ಲಿದ್ದ ಯಾತ್ರಿಕರು ಮತ್ತಿತರರು ಪತ್ತೆಹಚ್ಚ್ಗ್ದಿದರು. ಗುಂಡೆಸೆತವು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬ ಬಗ್ಗೆ ಈ ತನಕ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಳಿಕ ಪೊಲೀಸರು ಹಾಗೂ ಎಸ್‌ಜಿಪಿಸಿ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದರು. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆಯೆಂದು, ಅಮೃತಸರ ಪೊಲೀಸ್ ಆಯುಕ್ತ ಜತೀಂದರ್ ಔಲಾಖ್ ತಿಳಿಸಿದ್ದಾರೆ.
ಗುಂಡನ್ನು .315 ರೈಫಲ್‌ನಿಂದ ಹಾರಿಸಲಾಗಿದ್ದು, ಅದು ಮಂದಿರದೊಳಗಡೆಯಿಂದ ಎಸೆಯಲಾಗಿಲ್ಲವೆಂದು ಖಚಿತವಾಗಿದೆಯೆಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News