ದಿಲ್ಲಿ: ಪಾಕ್ ಏರ್‌ಲೈನ್ಸ್ ಕಚೇರಿ ಮೇಲೆ ಸಂಘಪರಿವಾರ ದಾಳಿ
Update: 2016-01-14 23:55 IST
ಹೊಸದಿಲ್ಲಿ,ಜ.14: ಸಂಘಪರಿವಾರ ಗುಂಪೊಂದರ ಸದಸ್ಯರು ಗುರುವಾರ ಇಲ್ಲಿಯ ಬಾರಾಖಂಬಾ ರಸ್ತೆಯಲ್ಲಿರುವ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಕಚೇರಿಯ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಆರೋಪಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು ಎಂದು ಡಿಸಿಪಿ ಜತಿನ್ ನರ್ವಾಲ್ ತಿಳಿಸಿದರು.
ಆರೋಪಿಗಳು ಕಳೆದ ವರ್ಷ ಇಲ್ಲಿಯ ಕೇರಳ ಹೌಸ್‌ನಲ್ಲಿ ಗೋಮಾಂಸದ ಖಾದ್ಯವನ್ನು ಒದಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿಯ ಸಹಚರರೆನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿದವು.