ಡಾಲರ್ ಎದುರು ರೂ. ವೌಲ್ಯ 67.25
Update: 2016-01-14 23:58 IST
ಹೊಸದಿಲ್ಲಿ, ಜ.14: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ವೌಲ್ಯವು ಅಮೆರಿಕನ್ ಡಾಲರ್ ಎದುರು 67.25 ರೂ.ಗೆ ಆಗಿದ್ದು, ತೀವ್ರ ಕುಸಿತವನ್ನು ಕಂಡಿದೆ. 2013ರ ಸೆಪ್ಟಂಬರ್‌ನಲ್ಲಿ ವಿತ,್ತ ಮಾರುಕಟ್ಟೆಯಲ್ಲಿ ಉಂಟಾದ ಭಾರೀ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ರೂಪಾಯಿ ವೌಲ್ಯದಲ್ಲಿ ತೀವ್ರ ಇಳಿಕೆಯಾದ ಬಳಿಕ ರೂಪಾಯಿ ಬೆಲೆಯಲ್ಲಾಗಿರುವ ಅತಿ ದೊಡ್ಡ ಕುಸಿತ ಇದೆನ್ನಲಾಗಿದೆ.
ಆದರೆ ತೈಲ ಬೆಲೆಯಲ್ಲಿ ಉಂಟಾಗಿರುವ ನಿರಂತರ ಕುಸಿತ ಹರಾಗೂ ಚೀನಾದ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿಯಿಂದಾಗಿ ಶೀಘ್ರವೇ ರೂಪಾಯಿ ವೌಲ್ಯವು ಚೇತರಿಸಿಕೊಳ್ಳಲಿದೆಯೆಂಬ ಕರೆನ್ಸಿ ವಹಿವಾಟುದಾರರು ನಿರೀಕ್ಷಿಸಿದ್ದಾರೆ. 2013ರ ಆಗಸ್ಟ್‌ನಲ್ಲಿ ಕರೆನ್ಸಿ ವೌಲ್ಯವು ಡಾಲರ್ ಎದುರು ದಾಖಲೆಯ 68.85 ಕುಸಿತವನ್ನು ಕಂಡಿದ್ದು, ಅದಕ್ಕಿಂತ ಇಂದಿನ ರೂಪಾಯಿ ವೌಲ್ಯ ತುಂಬಾ ಮೇಲ್ಮಟ್ಟದಲ್ಲಿದೆ.