ಕಡಿದ ಮರದ ದಿಮ್ಮಿಗಳನ್ನು ತೆರವುಗೊಳಿಸಿ
Update: 2016-01-15 00:09 IST
ಮಾನ್ಯರೆ,
ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ಜೆಪ್ಪು ರಿಟ್ರೀಟ್ ಹೌಸ್ ತನಕ ಮೊದಲನೆ ಹಂತವಾಗಿ ರಸ್ತೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ರಸ್ತೆ ಬದಿಯಲ್ಲಿನ ಹಲವು ಬೃಹತ್ ಮರಗಳು ಈಗಾಗಲೇ ಧರೆಗುರುಳಿದೆ. ಮುಕ್ಕಾಲು ಭಾಗದಲ್ಲಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಪೂರ್ತಿಗೊಂಡು ಮುಂದುವರಿಯುತ್ತಿದೆ.
ಎರಡನೆಯ ಹಂತವಾಗಿ ನಂದಿಗುಡ್ಡೆ ಸರ್ಕಲ್ (ಕೋಟಿ ಚೆನ್ನಯ ಸರ್ಕಲ್) ತನಕ ಕಾಮಗಾರಿ ನಡೆಸಲು ಮರಗಳನ್ನು ಕಡಿಯಲಾಗುತ್ತಿದೆ. ಈಗ ಸಮಸ್ಯೆ ಏನೆಂದರೆ ಮರಗಳನ್ನು ಕಡಿದು ಅವುಗಳ ರೆಂಬೆ ಕೊಂಬೆ, ದಿಮ್ಮಿಗಳನ್ನು ರಸ್ತೆಯ ಇಬ್ಬದಿಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹಾಕಲಾಗಿದೆ. ಅಲ್ಲದೆ, ಮರಗಳ ರೆಂಬೆಕೊಂಬೆಯ ಕಸಕಡ್ಡಿಗಳನ್ನು ಅಲ್ಲಲ್ಲಿ ರಾಶಿಹಾಕಲಾಗಿದೆ. ಹಾಗಾಗಿ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಅತ್ತಿತ್ತ ಸಂಚರಿಸಲು ತುಂಬಾ ತೊಂದರೆಗಳಾಗುತ್ತಿವೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಮರದ ದಿಮ್ಮಿ ಮತ್ತು ಕಸಕಡ್ಡಿ ತ್ಯಾಜ್ಯಗಳ ವಿಲೇವಾರಿ ಮಾಡಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸಿ.