ಪಾಕ್‌ನಿಂದ ಪಂಜಾಬ್‌ಗೆ ವಾರ್ಷಿಕ 7,500 ಕೋ.ರೂ.ವೌಲ್ಯದ ಡ್ರಗ್ಸ್
Update: 2016-01-15 12:13 IST
ಪಂಜಾಬ್, ಜ.15: ಪಾಕಿಸ್ತಾನದಿಂದ ಭಾರತದ ಪಂಜಾಬ್‌ಗೆ ವರ್ಷಕ್ಕೆ ಹೆರಾಯಿನ್ ಸೇರಿದಂತೆ 7,500 ಕೋಟಿ ರೂ. ವೌಲ್ಯದ ಮಾದಕ ವಸ್ತುಗಳು ಆಕ್ರಮವಾಗಿ ಹರಿದು ಬರುತ್ತಿದೆ ಎಂದು ಏಮ್ಸ್‌ನ ಅಧ್ಯಯನ ವರದಿ ತಿಳಿಸಿದೆ.
ಪಾಕ್‌ನಿಂದ ಹರಿದು ಬರುತ್ತಿರುವ ಮಾದಕ ವಸ್ತುಗಳಲ್ಲಿ ಹೆರಾಯಿನ್ ಪಾಲು ಅಧಿಕ. ಒಂದು ವರ್ಷದ ಅವಧಿಯಲ್ಲಿ 6,500 ಕೋಟಿ ರೂ. ವೌಲ್ಯದ ಹೆರಾಯಿನ್ ಪಾಕ್‌ನಿಂದ ಪಂಜಾಬ್‌ಗೆ ತಲುಪಿದೆ.
ಪಾಕಿಸ್ತಾನ ಗಡಿಯ ಮೂಲಕ ಒಳಬರುವ ಮಾದಕ ಪದಾರ್ಥಗಳನ್ನು ಪಂಜಾಬ್‌ನಲ್ಲಿ ಬಳಕೆ ಮಾಡುವುದು ಕಡಿಮೆ. ದಿಲ್ಲಿ ಮತ್ತಿತರ ದೊಡ್ಡ ನಗರಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಲು ಪಾಕ್‌ನ ಉಗ್ರರಿಗೆ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆದಾರರು ನೆರವು ನೀಡಿದ್ದಾರೆ ಎಂಬ ಗುಮಾನಿ ವ್ಯಕ್ತವಾಗಿದೆ.