×
Ad

ಚೀನಾ ವಸ್ತುಗಳಿಗೆ ತೆರಿಗೆ: ಡೊನಾಲ್ಡ್ ಟ್ರಂಪ್

Update: 2016-01-15 20:38 IST

ಚೀನಾ ತನ್ನ ಕರೆನ್ಸಿ ಯುವಾನ್‌ನ ಅಪವೌಲ್ಯವನ್ನು ನಿಲ್ಲಿಸದಿದ್ದರೆ, ಆ ದೇಶದ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸುವಂತೆ ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.

 ಚೀನಾದ ಕರೆನ್ಸಿಯ ಅಪವೌಲ್ಯವನ್ನು ಸರಿಪಡಿಸಲು 45 ಶೇಕಡ ತೆರಿಗೆ ವಿಧಿಸುವಂತೆ ತಾನು ನೀಡಿರುವ ಕರೆಯನ್ನು ಅವರು ಪುನರುಚ್ಚರಿಸಿದರು.

 ಈ ವಿಷಯದಲ್ಲಿ ಜಪಾನನ್ನೂ ಟೀಕಿಸಿದ ಅವರು, ಇಂಥದೇ ಚಟುವಟಿಕೆಗಳಲ್ಲಿ ಆ ದೇಶವೂ ತೊಡಗಿಕೊಂಡಿದೆ ಎಂದರು. ಅಮೆರಿಕದ ಕಂಪೆನಿ ಕ್ಯಾಟರ್‌ಪಿಲ್ಲರ್ ಇಂಕ್ ತಯಾರಿಸುವ ಟ್ರಾಕ್ಟರ್‌ಗಳು ಮತ್ತು ಜಪಾನ್‌ನ ಕೊಮಾಟ್ಸು ಲಿ. ತಯಾರಿಸುವ ಟ್ರಾಕ್ಟರ್‌ಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದನ್ನು ಅವರು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News