×
Ad

ಸೊಮಾಲಿಯ: ಆಫ್ರಿಕನ್ ಒಕ್ಕೂಟ ನೆಲೆಗೆ ದಾಳಿ

Update: 2016-01-15 20:53 IST

ಮೊಗಾದಿಶು, ಜ. 15: ನೈರುತ್ಯ ಸೊಮಾಲಿಯದಲ್ಲಿರುವ ಆಫ್ರಿಕನ್ ಒಕ್ಕೂಟದ ಶಾಂತಿಪಾಲಕರ ನೆಲೆಯ ಮೇಲೆ ಅಲ್-ಶಬಾಬ್ ಬಂಡುಕೋರರು ಶುಕ್ರವಾರ ದಾಳಿ ನಡೆಸಿದ್ದಾರೆ.
ಭಾರೀ ಶಸ್ತ್ರಸಜ್ಜಿತ ಉಗ್ರರು ನೆಲೆಯ ಆವರಣದೊಳಗೆ ನುಗ್ಗಿದ್ದು, ಶಾಂತಿ ಪಾಲಕರೊಂದಿಗೆ ಕಾಳಗದಲ್ಲಿ ತೊಡಗಿದ್ದಾರೆ ಎಂದು ಸೊಮಾಲಿ ಸೇನಾ ಅಧಿಕಾರಿಯೊಬ್ಬರು ತಿಳಿಸಿದರು.
ಕೆನ್ಯದ ಗಡಿಗೆ ಸಮೀಪದಲ್ಲಿರುವ ಎಲ್-ಅಡೆ ಪಟ್ಟಣದಲ್ಲಿ ಆಫ್ರಿಕನ್ ಒಕ್ಕೂಟ ಪಡೆಯ ಭಾಗವಾಗಿರುವ ಕೆನ್ಯದ ಪಡೆಗಳು ನಡೆಸುತ್ತಿರುವ ನೆಲೆಯ ಮೇಲೆ ಹತ್ತಾರು ಬಂಡುಕೋರರು ದಾಳಿ ನಡೆಸಿದರು ಎಂದು ಅವರು ಹೇಳಿದರು.
ಆತ್ಮಹತ್ಯಾ ಕಾರ್ ಬಾಂಬ್‌ನೊಂದಿಗೆ ದಾಳಿ ಆರಂಭವಾಯಿತು. ಬಳಿಕ ಬಂಡುಕೋರರು ನೆಲೆಯ ಒಳಗೆ ಪ್ರವೇಶಿಸುತ್ತಿರುವಾಗ ಭಾರೀ ಗುಂಡಿನ ದಾಳಿಯ ಸದ್ದು ಕೇಳಿಸಿತು ಎಂದರು.
--

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News