ಪೆಟ್ರೋಲ್ ಲೀ.ಗೆ 32 ಪೈಸೆ, ಡೀಸೆಲ್ ಲೀ.ಗೆ 85 ಪೈಸೆ ಕಡಿತ

Update: 2016-01-15 18:48 GMT

ಹೊಸದಿಲ್ಲಿ, ಜ.15: ಪೆಟ್ರೋಲ್‌ನ ಬೆಲೆ ಲೀ.ಗೆ 32 ಪೈಸೆ ಹಾಗೂ ಡೀಸೆಲ್‌ನ ಬೆಲೆಯನ್ನು ಲೀ.85 ಪೈಸೆಗಳಷ್ಟು ಶುಕ್ರವಾರ ಕಡಿಮೆ ಮಾಡಲಾಗಿದೆ. ಜ.15ರ ಮಧ್ಯರಾತ್ರಿ ಯಿಂದಲೇ ಪರಿಷ್ಕೃತ ದರ ಜಾರಿಗೆ ಬರುವುದೆಂದು ಭಾರತೀಯ ತೈಲ ನಿಗಮ ತಿಳಿಸಿದೆ.
ಈ ಬೆಲೆ ಇಳಿಕೆಯ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ಲೀ.ಗೆ ರೂ.59.03 ಹಾಗೂ ಡೀಸೆಲ್‌ನ ಬೆಲೆ ಲೀ.ಗೆ ರೂ.44.18 ಆಗಲಿದೆಯೆಂದು ಅದು ಹೇಳಿದೆ.


ಪೆಟ್ರೋಲ್ ಹಾಗೂ ಡೀಸೆಲ್‌ಗಳ ಅಂತಾರಾಷ್ಟ್ರೀಯ ಉತ್ಪಾದನೆ ದರ ಹಾಗೂ ರೂಪಾಯಿ-ಡಾಲರ್ ವಿನಿಮಯ ದರಗಳ ಹಾಲಿ ಮಟ್ಟಕ್ಕೆ ಅನುಸಾರವಾಗಿ ತೈಲ ಬೆಲೆ ಇಳಿಸಲಾಗಿದ್ದು, ಈ ಬೆಲೆ ಪರಿಷ್ಕರಣದ ಮೂಲಕ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆಂದು ಐಒಸಿ ತಿಳಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಕೊನೆಯ ಬಾರಿಗೆ ಪೆಟ್ರೋಲ್ ಲೀ.ಗೆ 63 ಪೈಸೆ ಹಾಗೂ ಡೀಸೆಲ್ ಲೀ.ಗೆ ರೂ. 1.06ರಷ್ಟು ಇಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News