×
Ad

ಕೋಲ್ಕತ್ತಾ : ವಾಯುಸೇನಾ ಅಧಿಕಾರಿಯನ್ನು ಬಲಿ ಪಡೆದ ಆಡಿ ಚಲಾಯಿಸುತ್ತಿದ್ದದ್ದು ತೃಣಮೂಲ ನಾಯಕನ ಪುತ್ರ !

Update: 2016-01-16 11:27 IST

Full View


ಕೊಲ್ಕತ್ತಾದಲ್ಲಿ ವಾಯುಸೇನಾ ಅಧಿಕಾರಿಯ ಸಾವಿಗೆ ಕಾರಣವಾದ ಆಡಿ ಕಾರನ್ನು ರಾಜ್ಯದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ನ ನಾಯಕ ಪುತ್ರ ಚಲಾಯಿಸುತ್ತಿದ್ದರೆಂದು ಖಚಿತಗೊಂಡಿದೆ. 


ಬುಧವಾರ ದುರಂತ ದ ಬಳಿಕ ಬಿಟ್ಟು ಹೋಗಲಾಗಿದ್ದ ಆದಿ ಕ್ಯೂ ೭ ಕಾರು , ಈ ಮೊದಲು ಆರ್ ಜೆ ದಿ ಯಲ್ಲಿದ್ದು ಇತ್ತೀಚಿಗೆ ತೃಣಮೂಲ ಸೇರಿದ್ದ ಮೊಹಮ್ಮದ ಸೊಹ್ರಾಬ್ ನ ಪುತ್ರ ಸಂಬಿಯ ಎಂದು ತಿಳಿದು ಬಂದಿದೆ. ಈ ಮೊದಲು ಕಾರನ್ನು ಈತನ ಸೋದರ ಅಂಬಿಯ ಚಲಾಯಿಸುತ್ತಿದ್ದರು ಎಂದು ಹೇಳಲಾಗಿತ್ತು. 


ಮೊಹಮ್ಮದ ಸೊಹ್ರಾಬ್ ಹಾಗು ಆತನ ಪುತ್ರರು ಈಗ ನಾಪತ್ತೆಯಾಗಿದ್ದಾರೆ. 
ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಆದೇಶದಂತೆ ಕೊಲೆ ಪ್ರಕರಣ ದಾಖಲಿಸಿ , ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆದರೆ ಈವರೆಗೆ ಯಾವುದೇ ಬಂಧನವಾಗಿಲ್ಲ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News