×
Ad

ಬಿಜೆಪಿಯಿಂದ ದೇಶದ ಜನರ ವಿಭಜನೆ: ರಾಹುಲ್

Update: 2016-01-16 13:42 IST

ಮುಂಬೈ: ಸಂಸತ್ ಕಲಾಪಕ್ಕೆ ತಡೆಯುಂಟು ಮಾಡುವುದು ಕಾಂಗ್ರೆಸ್‌ನ ನೀತಿಯಲ್ಲ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.
ವಿತ್ತಸಚಿವ ಅರುಣ್‌ಜೇಟ್ಲಿ ಈ ಹಿಂದೆ ಇಂಗ್ಲೆಡ್‌ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ‘ಸಂಸತ್ ಕಲಾಪಕ್ಕೆ ತಡೆಯುಂಟು ಮಾಡುವುದು ಬಿಜೆಪಿಯ ತಂತ್ರವಾಗಿದೆ’ ಎಂದು ಹೇಳಿದ್ದರು. ಆ ತಂತ್ರವನ್ನು ಹತ್ತು ವರ್ಷಗಳ ಕಾಲ ಬಿಜೆಪಿ ಮುಂದುವರಿಸಿತು. ತೊಂದರೆ ಮಾಡಲು ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ತೊಂದರೆಪಡಿಸಿತು ಎಂದು ರಾಹುಲ್ ನುಡಿದರು.
ನಾರ್ಸಿ ಮಾಂಜೀ ಇನ್‌ಸ್ಟಿಟ್ಯೂಟ್ ಆಫ್ ಮಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
 ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸವೇನೆಂದರೆ, ಬಿಜೆಪಿ ಜನರನ್ನು ಹಿಂದೂಗಳು ಹಾಗೂ ಸಿಖ್ಖರೆಂದು ವಿಭಜಿಸುತ್ತದೆ. ಆದರೆ ನನಗೆ ಎಲ್ಲರೂ ಭಾರತೀಯರು ಮಾತ್ರ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಹಾಗೂ ಜಿಎಸ್ಟಿ ಮಸೂದೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗೇಲಿ ಮಾಡಿದ್ದರು ಎಂದು ರಾಹುಲ್ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News