×
Ad

‘ರಾಜಸ್ಥಾನದಲ್ಲಿ ರಕ್ಷಣಾ ಉತ್ಪಾದನೆ’

Update: 2016-01-17 00:11 IST

ಜೈಪುರ, ಜ.16: ರಕ್ಷಣಾ ವಲಯದ ಉತ್ಪಾದನಾ ಘಟಕವೊಂದನ್ನು ರಾಜಸ್ಥಾನದಲ್ಲಿ ಸ್ಥಾಪಿಸುವ ನಿರೀಕ್ಷೆಯಿದೆ. ಅದು ಜೈಪುರ ಹಾಗೂ ದಿಲ್ಲಿನಗಳ ನಡುವೆ ಇರಲಿದೆಯೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಇಂದಿಲ್ಲಿ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ರಕ್ಷಣಾ ವಲಯದ ಉತ್ಪಾದನಾ ಘಟಕವಿಲ್ಲ. ರಾಜ್ಯದಲ್ಲಿ ಅಂತಹ ಕನಿಷ್ಠ ಒಂದು ಘಟಕವನ್ನಾದರೂ ಸ್ಥಾಪಿಸಬೇಕಿದೆ. ತಾವು ಹೆಲಿಕಾಪ್ಟರ್ ಅಥವಾ ಯುದ್ಧ ವಿಮಾನದ ಭಾಗಗಳು ಅಥವಾ ಅಂತಹ ಯಾವುದಾದರೊಂದನ್ನು ತಯಾರಿಸುವ ಘಟಕ ಸ್ಥಾಪನೆಯ ಬಗ್ಗೆ ಪರಿಶೀಲಿಸುತ್ತಿದ್ದೇವೆಂದು ಅವರು ಪತ್ರಕರ್ತರೊಡನೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News