×
Ad

ವೈದ್ಯರ ನೆರವಿನ ಆತ್ಮಹತ್ಯೆ: ಕೆನಡ ಸುಪ್ರೀಂ ಒಪ್ಪಿಗೆ

Update: 2016-01-17 00:15 IST

ಒಟ್ಟಾವ, ಜ. 16: ದೇಶದಲ್ಲಿ ವೈದ್ಯರ ನೆರವಿನ ಆತ್ಮಹತ್ಯೆಗೆ ಅನುಮೋದನೆ ನೀಡಲು ಕೆನಡದ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ. ಅದೇ ವೇಳೆ, ಈ ವಿಷಯಕ್ಕೆ ಸಂಬಂಧಿಸಿದ ಕಾನೂನು ರೂಪಿಸಲು ಸರಕಾರಕ್ಕೆ ಹೆಚ್ಚಿನ ಸಮಯಾವಕಾಶವನ್ನು ನೀಡಿದೆ.
ಫ್ರೆಂಚ್ ಮಾತನಾಡುವ ರಾಜ್ಯ ಕ್ಯೂಬೆಕ್‌ನಲ್ಲಿ ಈಗಾಗಲೇ ಓರ್ವ ವ್ಯಕ್ತಿಗೆ ಸಾಯಲು ಸಹಾಯ ಮಾಡಲಾಗಿದೆ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
 ವಾಸ್ತವವಾಗಿ ವೈದ್ಯರ ನೆರವಿನ ಆತ್ಮಹತ್ಯೆಯ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷದ ಫೆಬ್ರವರಿಯಲ್ಲೇ ತೆರವುಗೊಳಿಸಿತ್ತು. ಆದರೆ, ಈ ಸಂಬಂಧ ಸೂಕ್ತ ಕಾನೂನು ರಚಿಸಲು ಸರಕಾರಕ್ಕೆ ಒಂದು ವರ್ಷ ಕಾಲಾವಕಾಶ ನೀಡಿತ್ತು.
ಈಗ ಹೊಸ ಸರಕಾರ ಕಾನೂನು ರೂಪಿಸಲು ಇನ್ನೂ ಆರು ತಿಂಗಳ ಸಮಯಾವಕಾಶ ಕೋರಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸರಕಾರಕ್ಕೆ ಕಾಲಾವಕಾಶ ನೀಡಿದೆ ಹಾಗೂ ಅದೇ ವೇಳೆ, ಕೆಲವು ಶರತ್ತುಗಳಿಗೆ ಒಳಪಟ್ಟು ವೈದ್ಯರ ನೆರವಿನ ಆತ್ಮಹತ್ಯೆ ಆರಂಭಕ್ಕೆ ಅನುಮೋದನೆಯನ್ನೂ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News