×
Ad

‘ರಾಜಕಾರಣಿಗಳು ಕ್ರಿಕೆಟ್‌ನಿಂದ ದೂರವಿರಬೇಕು’

Update: 2016-01-17 00:17 IST

ಮುಂಬೈ, ಜ.16: ರಾಜಕಾರಣಿಗಳು ಕ್ರಿಕೆಟ್ ಆಡಳಿತದಿಂದ ದೂರವುಳಿಯಬೇಕೆಂಬ ಪ್ರಬಲ ಪ್ರತಿಪಾದನೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಮಾಡಿದ್ದಾರೆ.
ಇಲ್ಲಿನ ಖ್ಯಾತ ಬಿಸಿನೆಸ್ ಸ್ಕೂಲೊಂದರಲ್ಲಿ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಅವರಲ್ಲಿ ವಿದ್ಯಾರ್ಥಿಗಳು, ರಾಜಕಾರಣಿಗಳು ಕ್ರಿಕೆಟ್ ಹಾಗೂ ಕ್ರೀಡೆಗಳಿಂದ ದೂರವುಳಿಯಬೇಕೇ ಎಂಬ ಪ್ರಶ್ನೆಯನ್ನು ಕೇಳಿದರು.
ಕ್ರಿಕೆಟ್‌ನ ಆಡಳಿತದಲ್ಲಿ ರಾಜಕಾರಣಿಗಳು ಎಲ್ಲಿಯೂ ಹತ್ತಿರವಿರಬೇಕೆಂದು ತಾನು ಅಭಿಪ್ರಾಯಿಸುವುದಿಲ್ಲ. ಕ್ರಿಕೆಟ್, ಕ್ರಿಕೆಟಿಗರಿಂದಲೇ ನಡೆಯಬೇಕು. ರಾಜಕಾರಣಿಗಳು ಕ್ರಿಕೆಟ್ ನಡೆಸಬೇಕೆಂದು ತಾನು ಭಾವಿಸುವುದಿಲ್ಲವೆಂದು ರಾಹುಲ್ ಉತ್ತರಿಸಿದರು.
 ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯನ್ನು ನರೇಂದ್ರ ಮೋದಿ ಸರಕಾರವು ತಪ್ಪಾಗಿ ನಿಭಾಯಿಸಿದೆ. ಭಯೋತ್ಪಾದನೆ, ವಿದೇಶಾಂಗ ನೀತಿಗಳನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲ ಪರಿಣತರೊಂದಿಗೆ ಅದು ಸಮಾಲೋಚನೆ ನಡೆಸಲಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರ ನೇರವಾಗಿ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ. ಅವರ ಕೆಲಸವು ವ್ಯೆಹ ರಚನೆ ಮಾತ್ರವೇ ಹೊರತು, ರಾಷ್ಟ್ರೀಯ ಭದ್ರತಾ ಯೋಧರಂತೆ (ಎನ್‌ಎಸ್‌ಜಿ) ತಂತ್ರಗಾರಿಕೆಯದಲ್ಲ. ಏನು ಮಾಡಬೇಕೆಂದು ತಿಳಿಯದವರನ್ನು ಒಂದು ಕೆಲಸ ಮಾಡಲು ಬಿಟ್ಟರೆ, ಅದರಿಂದ ಸಮಸ್ಯೆಯೇ ಉಂಟಾಗುತ್ತದೆ ಎಂದವರು ಆರೋಪಿಸಿದರು.
ರಫ್ತು ಹಾಗೂ ರೂಪಾಯಿ ಕುಸಿಯುತ್ತಿವೆ. ತೈಲದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಆರ್ಥಿಕ ಪ್ರಬಂಧನ ಸಂಪೂರ್ಣ ವಿಫಲವಾಗಿದೆ. ಹಾಲಿ ಪ್ರಧಾನಿ ತಮ್ಮ ಪ್ರಧಾನಿಯನ್ನು(ಮನಮೋಹನ ಸಿಂಗ್) ಆರ್ಥಿಕತೆಯ ವಿಚಾರದಲ್ಲಿ ಪರಿಹಾಸ್ಯ ಮಾಡುತ್ತಿದ್ದರು. ಈಗ, ಈ ಪ್ರಧಾನಿಗೆ ತನ್ನ ಸಲಹೆ, ಕೆಲಸ ಮಾಡಿ ಎಂಬುದಾಗಿದೆ. ತಾವು ಲೋಕಸಭೆಯಲ್ಲಿ ಕೇವಲ 40ರಷ್ಟು ಜನರಲ್ಲ. ತಾವು ದೇಶದ ಶೇ.20ರಷ್ಟು ಮತಗಳಾಗಿದ್ದೇವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News