×
Ad

ಕಪಾಲಮೋಕ್ಷ ಪ್ರಕರಣ ಸಂಸದ ಮಿಥುನ್ ರೆಡ್ಡಿ ಬಂಧನ:

Update: 2016-01-17 15:17 IST

ಹೈದರಾಬಾದ್, ಜ.17: ತಿರುಪತಿಯಲ್ಲಿ ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾದ ಸ್ಟೇಷನ್ ಮ್ಯಾನೇಜರ್ ಒಬ್ಬರ ಕೆನ್ನೆಗೆ ಬಾರಿಸಿದ  ಪ್ರಕರಣಕ್ಕೆ ಸಂಬಂಧಿಸಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಿಥುನ್ ರೆಡ್ಡಿ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಮಿಥುನ್‌ ರೆಡ್ಡಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ,  14 ದಿನಗಳ ಕಾಲ ನ್ಯಾಯಾಂಗ ಬಂಧನ  ವಿಧಿಸಲಾಗಿದೆ. ಪಿ.ಮಿಥುನ್ ರೆಡ್ಡಿ ಮತ್ತು ಇನ್ನೊಬ್ಬ ಆರೋಪಿ ಮಧುಸೂಧನ  ರೆಡ್ಡಿ ಅವರನ್ನು ಇಂದು ಚೆನ್ನೈ ಏರ್‌ಪೋರ್ಟ್‌‌ನಲ್ಲಿ ವಶಕ್ಕೆ ತೆಗೆದುಕೊಂಡು ಆಂಧ್ರಪ್ರದೇಶ ಪೊಲೀಸರಿಗೆ ಒಪ್ಪಿಸಲಾಗಿತ್ತು.

 ಕಡಪ ಜಿಲ್ಲೆಯ ರಾಜಮ್‌ಪೇಟ್‌ ಕ್ಷೇತ್ರದ ಸಂಸದ ಪಿ .ಮಿಥನ್ ರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ತಿರುಪತಿಯಲ್ಲಿರುವ ಏರ್ ಪೋರ್ಟ್ ಗೆ ಹೋಗಿದ್ದರು. ಏರ್ ಪೋರ್ಟ್ ನಿಂದ ಹೊರ ಬರುವಾಗ ಅಲ್ಲಿನ ಸಿಬ್ಬಂದಿಗಳು ಸಂಸದ ಪಿ .ಮಿಥನ್ ರೆಡ್ಡಿ  ಮತ್ತಿತರರಲ್ಲಿ ಬೋರ್ಡಿಂಗ್ ಪಾಸ್ ಕೇಳಿದ್ದಾರೆ. ಸಂಸದ ಮಿಥನ್ ರೆಡ್ಡಿ ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ. ಅನಂತರ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದ ಸಂಸದ ನೇರವಾಗಿ ಏರ್ ಪೋರ್ಟ್ ಮ್ಯಾನೇಜರ್ ರಾಜಶೇಖರ್ ಬಳಿ ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸಂಸದಮಿಥನ್ ರೆಡ್ಡಿ   ಮ್ಯಾನೇಜರ್ ಅವರು ಕಪಾಲಕ್ಕೆ  ಬಾರಿಸಿದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News