×
Ad

ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ವಿಧಿವಶ

Update: 2016-01-17 18:47 IST

ಬೆಂಗಳೂರು ,ಜ.17: ಕನ್ನಡದ  ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ (ಲಕ್ಷ್ಮಣ ರಾವ್ ಮೋಯಿತೆ) ಇಂದು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು.  ಅವರಿಗೆ 83 ವರ್ಷ ವಯಸ್ಸಾಗಿತ್ತು.

ಗೀತಪ್ರಿಯ ಗಂಟಲು ಕ್ಯಾನ್ಸರ್‌ನಿಂದ ಹಲವು ಸಮಯಗಳಿಂದ ಬಳಲುತ್ತಿದ್ದರು.
 ಶ್ರಾವಣ ಸಂಭ್ರಮ, ಮಣ್ಣಿನ ಮಗ ಸೇರಿದಂತೆ ಸುಮಾರು 40 ಚಿತ್ರಗಳನ್ನು ನಿರ್ದೇಶಿಸಿದ್ದ ಗೀತಪ್ರಿಯ 250ಕ್ಕೂ ಅಧಿಕ ಗೀತೆ ರಚನೆ ಮಾಡಿದ್ದರು.ಶ್ರಾವಣ ಸಂಭ್ರಮ ಅವರ ಕೊನೆಯ ಚಿತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News