×
Ad

ವೈವಾಹಿಕ ಜೀವನ: ಉತ್ತರದಲ್ಲೇ ಧೀರ್ಘಾಯುಷಿ

Update: 2016-01-18 09:01 IST

ಪಂಜಾಬ್‌ನಿಂದ ಹಿಡಿದು ಬಿಹಾರದವರೆಗೆ ಬಹುತೇಕ ಉತ್ತರ ರಾಜ್ಯಗಳು ಹಾಗೂ ಪಶ್ಚಿಮದಲ್ಲಿ ಮಹಾರಾಷ್ಟದಲ್ಲಿ 40 ವರ್ಷಕ್ಕಿಂತ ಹೆಚ್ಚು ಕಾಲ ವೈವಾಹಿಕ ಜೀವನ ನಡೆಸಿದ ದಂಪತಿ ಅತ್ಯಧಿಕ.

2011ರ ಜನಗಣತಿಯ ಅಂಕಿ ಅಂಶಗಳಂತೆ 40 ವರ್ಷಕ್ಕಿಂತ ಹೆಚ್ಚು ವೈವಾಹಿಕ ಜೀವನ ನಡೆಸಿದ ದಂಪತಿಗಳ ಸಂಖ್ಯೆ ಈ ರಾಜ್ಯಗಳಲ್ಲಿ ಶೇಕಡ 11-12ರಷ್ಟಿದೆ.

ಇದಕ್ಕೆ ತದ್ವಿರುದ್ಧವಾಗಿ ಇಡೀ ಈಶಾನ್ಯ ರಾಜ್ಯಗಳಲ್ಲಿ ಈ ಪ್ರಮಾಣ ಶೇಕಡ 7ರಷ್ಟು ಮಾತ್ರ ಇದೆ, ಮೇಘಾಲಯದಲ್ಲಿ 40 ವರ್ಷ ವೈವಾಹಿಕ ಜೀವನ ನಡೆಸಿದವರ ಸಂಖ್ಯೆ ಶೇಕಡ 4.1ರಷ್ಟು ಮಾತ್ರ. ಇದು ಹರ್ಯಾನ ಅಥವಾ ಮಹಾರಾಷ್ಟ್ರದ ಮೂರನೇ ಒಂದರಷ್ಟು ಭಾಗ.

ಭಾರತದಾದ್ಯಂತ ಒಟ್ಟಾರೆಯಾಗಿ 40 ವರ್ಷದಷ್ಟು ಸಂಸಾರ ನಡೆಸಿದ ದಂಪತಿಗಳ ಸಂಖ್ಯೆ ಶೇಕಡ 10ರಷ್ಟಿದೆ. ರಾಜ್ಯಗಳ ನಡುವೆ ಈ ಭಾರಿ ಅಂತರ ಇರುವುದು ಪ್ರೀತಿ ಅಥವಾ ನಿಷ್ಠೆಯ ಕಾರಣದಿಂದ ಅಲ್ಲ. ಸಂಪ್ರದಾಯ ಹಾಗೂ ಆರೋಗ್ಯದ ಕಾರಣದಿಂದ ಎನ್ನುವುದು ಸಮಾಜಶಾಸ್ತ್ರಜ್ಞರ ಅಭಿಮತ. ಸುಧೀರ್ಘ ಸಂಸಾರ ಜೀವನಕ್ಕೆ ಮುಖ್ಯ ಕಾರಣವೆಂದರೆ, ಅವರು ವಿವಾಹವಾಗಿರು ವಯಸ್ಸು ಹಾಗೂ ಎಷ್ಟು ವರ್ಷ ಕಾಲ ಅವರು ಬದುಕಿರುತ್ತಾರೆ ಎನ್ನುವುದು. ಎಲ್ಲೆಡೆ ನಿರೀಕ್ಷಿತ ಜೀವಿತಾವಧಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈವಾಹಿಕ ಜೀವನದ ಅವಧಿ ಕೂಡಾ ಹೆಚ್ಚುತ್ತಿದೆ.

ಶೇಕಡ 11.6ರಷ್ಟು ಧೀರ್ಘಸಂಸಾರಿಗಳನ್ನು ಹೊಂದಿರುವ ಹರ್ಯಾಣ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಮೊದಲ ಸ್ಥಾನದಲ್ಲಿವೆ. ಮಧ್ಯಪ್ರದೇಶ (11.5) ಹಾಗೂ ರಾಜಸ್ಥಾನ (11.2) ನಂತರದ ಸ್ಥಾನದಲ್ಲಿವೆ. ಅತ್ಯಂತ ಕಡಿಮೆ ಪ್ರಮಾಣದ ಧೀರ್ಘಸಂಸಾರಿಗಳನ್ನು ಹೊಂದಿರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೆಂದರೆ, ದಾದ್ರ ಮತ್ತು ನಗರ ಹವೇಲಿ (5.4), ಅಸ್ಸಾಂ (5.2), ನಾಗಾಲ್ಯಾಂಡ್ (4.8), ಅರುಣಾಚಲಪ್ರದೇಶ (4.7) ಮತ್ತು ಮೇಘಾಲಯ (4.1).ಉತ್ತರ ಭಾರತದಲ್ಲಿ ಕಿರಿಯ ವಯಸ್ಸಿನಲ್ಲೇ ವಿವಾಹಗಳಾಗುವುದರಿಂದ ಈ ಪ್ರಮಾಣ ಅಧಿಕ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News