×
Ad

ಬೇಲ್‌ ಡೀಲ್‌ ಪ್ರಕರಣ: ನ್ಯಾಯಾಧೀಶ ಪ್ರಭಾಕರ ರಾವ್‌ ನಿಗೂಢ ಸಾವು

Update: 2016-01-18 11:12 IST

ಹೈದರಾಬಾದ್‌, ಜ.18: ಮಾಜಿ ಸಚಿವ ಜನಾರ್ದನ ರೆಡ್ಡಿ ಬೇಲ್‌ ಡೀಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ನ್ಯಾಯಾಧೀಶ ಪ್ರಭಾಕರ ರಾವ್‌  ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾರೆ.
ಹೈದರಾಬಾದ್‌ನ ಈಸ್ಟ್ ಮಾರೆಡ್‌ಪಳ್ಳಿ ಪ್ರದೇಶದಲ್ಲಿರುವ ಮನೆಯಲ್ಲಿ ಪ್ರಭಾಕರ ರಾವ್‌  ನೇಣು ಬಿಗಿದ ಸ್ಥಿತಿಯಲ್ಲಿ ಶವ  ಪತ್ತೆಯಾಗಿದೆ.
ಜನಾರ್ದನ ರೆಡ್ಡಿ ಬೇಲ್‌ ಡೀಲ್‌ ಪ್ರಕರಣದಲ್ಲಿ ನ್ಯಾಯಾಧೀಶ ಪ್ರಭಾಕರ ರಾವ್‌ ಜೈಲು ಸೇರಿ, ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು.  ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪ್ರಭಾಕರ ರಾವ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News