×
Ad

ಇರಾನ್‌ಗೆ 170 ಕೋಟಿ ಡಾಲರ್ ಪಾವತಿಸಲು ಅಮೆರಿಕ ನಿರ್ಧಾರ

Update: 2016-01-18 23:23 IST

ವಾಶಿಂಗ್ಟನ್, ಜ. 18: ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದ ಅವಧಿಯಲ್ಲಿ ಪಡೆದುಕೊಂಡಿರುವ 40 ಕೋಟಿ ಡಾಲರ್ ಮೊತ್ತವನ್ನು ಪಾವತಿಸಲು ಮತ್ತು 130 ಕೋಟಿ ಡಾಲರ್ ಬಡ್ಡಿಯನ್ನು ನೀಡಲು ಅಮೆರಿಕ ನಿರ್ಧರಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ರವಿವಾರ ತಿಳಿಸಿದ್ದಾರೆ.
ಸಾಲ ವಸೂಲಿಗಾಗಿ ಇರಾನ್ ಅಂತಾರಾಷ್ಟ್ರೀಯ ಕಾನೂನು ನ್ಯಾಯಮಂಡಳಿಯಲ್ಲಿ ಹೂಡಿರುವ ದಾವೆಯನ್ನು ಈ ಪಾವತಿ ಇತ್ಯರ್ಥಗೊಳಿಸುತ್ತದೆ.
‘‘ಇದು ಇರಾನ್ ಕೇಳಿರುವ ಮೊತ್ತಕ್ಕಿಂತ ತುಂಬಾ ಕಡಿಮೆ’’ ಎಂಬುದಾಗಿ ಟೆಲಿವಿಶನ್‌ನಲ್ಲಿ ಘೋಷಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಸಾಲ ಮರುಪಾವತಿಯ ತನ್ನ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
1979ರ ಇಸ್ಲಾಮಿಕ್ ಕ್ರಾಂತಿಯ ಮೊದಲು ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಇರಾನ್ 40 ಕೋಟಿ ಡಾಲರ್ ಪಾವತಿಸಿತ್ತು. ಆದರೆ, ಕ್ರಾಂತಿಯ ಬಳಿಕ ಉಭಯ ದೇಶಗಳ ಸಂಬಂಧಗಳು ಹಳಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News