ವಾರ್ಷಿಕ ಚಂದಾ ರದ್ದುಪಡಿಸಿದ ವಾಟ್ಸ್‌ಆ್ಯಪ್
Update: 2016-01-18 23:27 IST
ವಾಶಿಂಗ್ಟನ್, ಜ. 18: ತಾನು ಇನ್ನು ಮುಂದೆ ಬಳಕೆದಾರರಿಂದ ವಾರ್ಷಿಕ ಚಂದಾ ಸಂಗ್ರಹಿಸುವುದಿಲ್ಲಎಂದು ಜನಪ್ರಿಯ ಮೊಬೈಲ್ ಸಂದೇಶ ಆ್ಯಪ್ ವಾಟ್ಸ್‌ಆ್ಯಪ್ ಹೇಳಿದೆ.
ಅದೇ ವೇಳೆ, ಆದಾಯ ಸಂಗ್ರಹಣೆಗಾಗಿ ತೃತೀಯ ಪಕ್ಷದ ಜಾಹೀರಾತುಗಳನ್ನೂ ಪಡೆದುಕೊಳ್ಳುವುದಿಲ್ಲ ಫೇಸ್‌ಬುಕ್ ಇಂಕ್ ಒಡೆತನದ ಆ್ಯಪ್ ಹೇಳಿದೆ. ವಾಟ್ಸ್‌ಆ್ಯಪ್ ಜಗತ್ತಿನಾದ್ಯಂತ 90 ಕೋಟಿ ಬಳಕೆದಾರರನ್ನು ಹೊಂದಿದೆ ಹಾಗೂ ಇದು ಎಲ್ಲ ವಿಧದ ಫೋನ್‌ಗಳಲ್ಲೂ ಸುಲಲಿತವಾಗಿ ಕೆಲಸ ಮಾಡುತ್ತದೆ.
ಆ್ಯಪ್ ಮೂಲಕ ಬಳಕೆದಾರರು ನೇರವಾಗಿ ವಾಣಿಜ್ಯ ಸಂಸ್ಥೆಗಳನ್ನು ಸಂಪರ್ಕಿಸಲು ಸಾಧ್ಯವಾಗುವ ಟೂಲ್ ಒಂದನ್ನು ಪರೀಕ್ಷಿಸುವುದಾಗಿ ಹೇಳಿದೆ.