ಚೀನಾದ ಕೆಂಗಣ್ಣು ಧಿಕ್ಕರಿಸಿ ತೈವಾನ್, ಅಮೆರಿಕ ಭಾಯಿ-ಭಾಯಿ
Update: 2016-01-18 23:39 IST
ತೈಪೆ, ಜ. 18: ತೈವಾನ್‌ನ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (ಡಿಪಿಪಿ) ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಬೆನ್ನಿಗೇ, ಪಕ್ಷದ ಹಿರಿಯ ಸದಸ್ಯರೊಬ್ಬರು ಅಮೆರಿಕಕ್ಕೆ ಭೇಟಿ ನಿಡಲಿದ್ದಾರೆ.
ಸ್ವಾತಂತ್ರದ ಪರವಾಗಿರುವ ಪಕ್ಷ ತೈವಾನ್‌ನಲ್ಲಿ ಅಧಿಕಾರಕ್ಕೆ ಬರುತ್ತಲೇ ಎಚ್ಚೆತ್ತುಕೊಂಡಿರುವ ಚೀನಾ, ಸ್ವಾತಂತ್ರದ ‘‘ಕನವರಿಕೆ’’ಯನ್ನು ಬಿಟ್ಟುಬಿಡುವಂತೆ ತೈವಾನ್‌ಗೆ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ, ಡಿಪಿಪಿಯ ಮಹಾ ಕಾರ್ಯದರ್ಶಿ ಜೋಸೆಫ್ ವು ವಾಶಿಂಗ್ಟನ್‌ಗೆ ನೀಡಲಿರುವ ಭೇಟಿ ಮಹತ್ವ ಪಡೆದುಕೊಂಡಿದೆ.
ತನ್ನ ಮಹತ್ವದ ಮಿತ್ರ ಹಾಗೂ ಶಸ್ತ್ರಾಸ್ತ್ರಗಳ ಮೂಲವಾಗಿರುವ ದೇಶದೊಂದಿಗಿನ ಮೈತ್ರಿಗೆ ತೈವಾನ್ ಮಹತ್ವ ನೀಡಿರುವುದು ವೇದ್ಯವಾಗಿದೆ.