×
Ad

ಇಂದು ವೈಕಂ ಮುಹಮ್ಮದ್ ಬಶೀರ್ 108ನೆ ಜನ್ಮದಿನ

Update: 2016-01-19 14:48 IST
Editor : ಎ. ಎಂ

 ವೈಕಂ ಮುಹಮ್ಮದ್ ಬಶೀರ್ ಸ್ವಾತಂತ್ರ್ಯ ಹೋರಾಟಗಾರ. ಧೀಮಂತ ಸಾಹಿತಿ. ಮಳೆಯಾಳದಲ್ಲಿ ಸಣ್ಣ ಕತೆಗಳ ಮೂಲಕ ಅದ್ಭುತವನ್ನು ಸೃಷ್ಟಿಸಿದ ಮಹದದ್ಭುತ ವ್ಯಕ್ತಿ. ಅವರಿಂದ ಬಂದಿರುವ ಎಲ್ಲ ಕೃತಿಗಳು ಓದುಗರನ್ನು ಓದಿಸಿಕೊಳ್ಳುತ್ತಾ ಹೋಗುವಂತಹದ್ದು. ಮುಖ್ಯವಾಗಿ ಪುಸ್ತಕಗಳನ್ನು ಮೇಯುವ ಆಡುಗಳನ್ನಾಗಿ ಮಲೆಯಾಳಿ ಓದುಗರನ್ನು ಅವರ ಬರಹಗಳು ಸೃಷ್ಟಿಸಿತು..ಆಡಿಗೆ ಏನು ತಿಂದರೂ ಎಷ್ಟು ತಿಂದರೂ ಕರಗುತ್ತದೆ. ಮತ್ತುಮತ್ತೂ ಓದಿ ಅರ್ಥೈಸಿಕೊಳ್ಳುವ ಶಕ್ತಿಯನ್ನು ಮಳೆಯಾಳಿಗಳಲ್ಲಿ ಅವರು ಸೃಷ್ಟಿಸಿದರೆಂದು ಸಂದೇಹವಿಲ್ಲದೆ ಹೇಳಬಹದು. ಸಾಹಿತಿ ವಿಎನ್‌ಕೆ ಮತ್ತು ಓವಿಜಯನ್‌ರು ಬಶೀರ್‌ಕುರಿತು ಬರೆದ ಲೇಖನಗಳಲ್ಲಿ ಬಶೀರ್ ಭಾಷೆಯನ್ನು ಮಿತವಾಗಿ ಖರ್ಚು ಮಾಡುತ್ತಿದ್ದರು ಎಂದು ಹೇಳುತ್ತಾರೆ." ನಾವು ಭಾಷೆಯಲ್ಲಿ ಧಾರಾಳಿಗಳಾದರೆ, ಬಶೀರ್ ತಮಗೆ ವಿರುದ್ಧವಾಗಿದ್ದರು" ಎಂದು ಅವರು ಒಪ್ಪಿಕೊಳ್ಳುತ್ತಾರೆ.

                         "ಎಂಡೆಪ್ಪುಪ್ಪಾಕ್ಕೊರಾನೆಯುಂಡಾಯಿರುನ್ನು(ನನ್ನ ಅಜ್ಜನಿಗೊಂದು ಆನೆಯಿತ್ತು)" ಎಂಬ ಕಾದಂಬರಿಯಲ್ಲಿ ಬರುವ "ಬೆಳಕಿಗೆಂಥ ಬೆಳಕು" ಎಂಬ ಪದಪ್ರಯೋಗವು ಕಡಿಮೆ ಪದ ಬಳಕೆಯ ವಾಕ್ಯಗಳಿಗೊಂದು ಅರ್ಥವತ್ತಾದ ಉದಾಹರಣೆಯಾಗಿದೆ. ಬಶೀರ್‌ರ ಕುರಿತ ಭಾಷಣ ಸರಣಿ ನಡೆದಿದ್ದಾಗಿ ಇ. ಟಿ ಪದ್ಮನಾಭನ್ ವಿವರಿಸುತ್ತಿದ್ದುದು ನೆನಪಾಗುತ್ತಿದೆ. ಬಶೀರ್ ಮೂರೇ ಮೂರು ಶಬ್ದಗಳು ಮತ್ತು ಅದರಲ್ಲೊಂದನ್ನು ಮತ್ತೆ ಬರೆದು ಮ್ಯಾಜಿಕ್ ಸೃಷ್ಟಿಸುತ್ತಿದ್ದರು. ಎಂದು ಅವರು ಹೇಳಿದ್ದಾರೆ. ಯಾವತ್ತು ಹಣದ ಬೆಲೆಯನ್ನು ಜಿಪುಣನೇ ಹೆಚ್ಚು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾನೆ ಹಾಗೂ ಸ್ವಲ್ಪ ಹಣ ಖರ್ಚು ಮಾಡಿ ಹೆಚ್ಚು ಲಾಭಗಳಿಸಲು ಶ್ರಮಿಸುತ್ತಾನೆ. ಬಶೀರ್‌ರಬರಹಗಳು ಕೂಡ ಈರೀತಿಯದ್ದಾಗಿವೆ. ಅವರು ಬಳಸುವ ಚಿಕ್ಕ ಚಿಕ್ಕ ವಾಕ್ಯ ಗಳು ಅವುಗಳ ಸಂದರ್ಭವನ್ನೂ ಮೀರಿ ಆ ಕಾದಂಬರಿಯನ್ನೂ ಮೀರಿ ಬೆಳೆದು ಅವರ ಸಾಹಿತ್ಯಕ್ಕೆ ಅಡಿಗಲ್ಲಾಗಿ ವರ್ತಿಸುವುದನ್ನು ಕಾಣಬಹುದು. ಇದು ಬಶೀರ್‌ರ ಕಥನ ಶೈಲಿಯ ವಿಶೇಷತೆ ಅಥವಾ ಅವರ ರಚನಾ ಶೈಲಿಯಾಗಿದೆ. ಕಾವ್ಯ ರೂಪಕಗಳಂತಹ ವಾಕ್ಯಗಳನ್ನು ರಚಿಸುವುದು ಅವರಿಗೆ ಸಿದ್ದಿಸಿತ್ತು. ಅವರ ಕಾವ್ಯಾತ್ಮಕ ಪದಗುಚ್ಛಗಳು ಸದಾ ಓದುಗರ ನೆನಪಿನಂಗಳದಲ್ಲಿ ಜೀವಂತವಿರುತ್ತಿದ್ದವು. ಅದು ಹೇಗೆಂದರೆ ಓದುಗ ಹೇಳಲು ಸಾಧ್ಯವಿಲ್ಲದಂತಹಾ ಮತ್ತು ಅವನು ಹೇಳ ಬಯಸುವಂತಹ ವಿಷಯಗಳನ್ನು ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಅತಿ ಸುಂದರವಾಗಿ ಕಟ್ಟಿಕೊಡುತ್ತಿದ್ದುದ್ದು ಓದುಗರ ನೆನಪಿನಲ್ಲಿ ಉಳಿಯುವಂತೆ ಇರುತ್ತಿದ್ದವು.

        ಬಶೀರ್‌ರ ಬರಹಗಳ ಓದುಗರಲ್ಲಿ ಒಬ್ಬರಾದ ಕಲ್ಪಟ್ಟ ನಾರಾಯಣನ್‌ರು ಬರೆದ  ಗದ್ಯ ಲೇಖನಗಳಲ್ಲಿ ಬಶೀರ್‌ರ ಪ್ರಭಾವವಿರುತ್ತಿತ್ತು. ಅಂತಹ ಒಂದೆರಡು ಸನ್ನಿವೇಶಗಳಾದರೂ ಇರುತ್ತಿದ್ದವು. ವೈಲಾಪಿಳ್ಳಿಯವರು ಬರೆದ "ಮಾಂಬಯ" (ಮಾವಿನ ಹಣ್ಣು )ಎಂಬ ಲೇಖನದ ಆರಂಭದ ಸಾಲಿನಲ್ಲೆ ಬಶೀರ್ ಪ್ರಭಾವ ಗೋಚರಿಸುತ್ತದೆ. " (ಮಾವಿನ ಹಣ್ಣೆಂದು ಹೇಳುವಾಗ ಮಾವಿನಹಣ್ಣನ್ನೇ ಕಂಡಂಷ್ಟು ಮಾವಿನ ಹಣ್ಣು ಪ್ರಸಿದ್ಧವಾಗಿದೆ ) ಹೀಗೆ ಬರಹದಲ್ಲಿ ಅದ್ಭುತಗಳನ್ನು ಸೃಷ್ಟಿಸುವಾಗಲೇ ಲೇಖಕನ ಬರಹ ಹರಿತವಾಗುತ್ತವೆ ನುರಿತವಾಗುತ್ತವೆ.ನಾವುಬಶೀರ್‌ರನ್ನು ಒಮ್ಮೆ ಓದಿಯೇ ಜೆರ್ಟ್ರುಡ್ ಸ್ಟೈನ್‌ರ ಪ್ರಸಿದ್ಧ ಕೃತಿ ’ರೋಸ್ ಈಸ್ ಎ ರೋಸ್ ಈಸ್ ಎ ರೋಸ್’ ಎಂಬ ರಚನೆಯ ಕಾವ್ಯತ್ಮಾಕ ಸೊಬಗು ನಮಗೆ ಸರಿಯಾಗಿ ಗೊತ್ತಾಗುವುದು.

          ಪಾಂಬೂಂ ಕಣ್ಣಾಡಿಯುಂ(ಹಾವು ಮತ್ತು ಕನ್ನಡಿ) ಕಥೆಯಲ್ಲಿ ಕಥೆ ಹೇಳುವವನನ್ನು ಹಾವು ಸುತ್ತು ಹಾಕುತ್ತಿದೆ. ಅಥವಾ ಅವನನ್ನು ಸರ್ಪರೂಪಿಯಾದ ಭಯಕ್ಕೆ ಹೋಲಿಸಿದ್ದಾರೆ. "ನಾನೊಬ್ಬ ಜೀವಂತ ಭಯವಾಗಿದ್ದೇನೆ". "ನಿದ್ದೆ ಕಪ್ಪು ಕಡಲಾಗಿದೆ" ಎಂದು ನನ್ನಜ್ಜನಿಗೊಂದಾನೆಯಿತ್ತು ಎಂಬ ಕಾದಂಬರಿಯಲ್ಲಿ ಬಶೀರ್ ಬರೆದರು. ಅದೇ ಕೃತಿಯಲ್ಲಿ ಆನಂತರ "ಬೆಳಕಿಗೆಂಥ ಬೆಳಕು" ಎಂಬ ಅದ್ಭುತ ವಾಕ್ಯ ಯಾರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಬಶೀರ್ ಬರೆದರು "ಹೀಗೆಯೂ ಅವಳೊಂದು ಮರವಾಗಿದ್ದಾಳೆ". ಬಶೀರ್ ಸಣ್ಣ ವಾಕ್ಯಗಳ ಮೂಲಕ ಅನಾಯಸವಾಗಿ ಗದ್ಯದ ಪದ್ಯವನ್ನು ಸೃಷ್ಟಿಸಿದ್ದಾರೆ ಎನ್ನಬಹದು. ವಾಸ್ತವದಲ್ಲಿ ವೈಕಂ ಮುಹಮ್ಮದ್ ಬಶೀರ್ ಏನು ಮಾಡಿದರು ಎಂಬ ಪ್ರಶ್ನೆಗೆ ? "ಪಾತುಮ್ಮಳ ಆಡು" ಕಥೆಯಲ್ಲಿಯೇ ಉತ್ತರವಿದೆ. "ಆರಾಣೀ ಚಾಂಬ ಮರತ್ತಿಂಡೆ ತಾಯ್ನ ಕೊಂಬುಗಳ್ ಮುಗಳಿಲೆಕ್ ವಲಿಚ್ಚು ಕೆಟ್ಟಿಯದ್?" *(ಯಾರೀ (ಚಾಂಬ )ಮರದ ತಗ್ಗಿದ ರೆಂಬೆಗಳನ್ನು ಮೇಲಕ್ಕೆ ಎಳೆದು ಕಟ್ಟಿದ್ದು?" ಹೀಗೆ ಆಕರ್ಷಕ ಪದಪುಂಜಗಳಿಂದ ಬಶೀರ್ ಮಳೆಯಾಳಂ ಸಾಹಿತ್ಯಲೋಕದಲ್ಲಿ ಅಮರರಾಗಿದ್ದಾರೆ.

Writer - ಎ. ಎಂ

contributor

Editor - ಎ. ಎಂ

contributor

Similar News