×
Ad

ಮುದ್ದಣನನ್ನು ಗೌರವಿಸಿ

Update: 2016-01-19 23:39 IST


ಜನವರಿ 24ರಂದು ಕವಿ ಮುದ್ದಣನ 146ನೆ ಜನ್ಮದಿನ. ಇವರ ನಿಜನಾಮ ನಂದಳಿಕೆ ಲಕ್ಷ್ಮೀನಾರಾಯಣಪ್ಪ. ಇವರು ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ 24-01-1901ರಲ್ಲಿ ನಿಧನ ಹೊಂದಿದರು. ಶಿಕ್ಷಣ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದ ಇವರು ಉಡುಪಿ ಜಿಲ್ಲೆಯ ಹೆಮ್ಮೆಯ ಸಾಹಿತಿಯಾಗಿದ್ದರು. ಮೊದಲು ವ್ಯಾಯಾಮ ಶಿಕ್ಷಕರಾಗಿ ನಂತರ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಅನಾರೋಗ್ಯಕ್ಕೆ ಒಳಗಾಗಿ ಮರಣ ಹೊಂದಿದರು.
  
ಕವಿ ಮುದ್ದಣರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯವಾದ ಸಾಹಿತ್ಯ ಕೃತಿಗಳ ಕೊಡುಗೆ ನೀಡಿದ್ದಾರೆ. ಅವುಗಳಲ್ಲಿ ರಾಮಾಶ್ವಮೇಧ ಕಾವ್ಯ, ಗೋಧಾವರಿ ಕಾದಂಬರಿ, ಅದ್ಭುತ ರಾಮಾಯಣ, ಶ್ರೀರಾಮಪಟ್ಟಾಭಿಷೇಕ ಕೃತಿಗಳು ಪ್ರಮುಖವಾದವು. ಇದಲ್ಲದೆ ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಆ ಕ್ಷೇತ್ರಕ್ಕೆ ನೀಡಿದ್ದಾರೆ. ಹಾಗಾಗಿ ಅವರ ಜನ್ಮದಿನವನ್ನು ಆಚರಿಸಿ ಅವರನ್ನು ಸ್ಮರಿಸಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಉಡುಪಿ ನಗರ ಆಡಳಿತ ಅಂದು ನಗರ ಸಭೆಯ ಮುಂದಿರುವ ಮುದ್ದಣನ ಶಿಲಾಪ್ರತಿಮೆಯನ್ನು ಸ್ವಚ್ಛಗೊಳಿಸಿ ಜನ್ಮದಿನ ಗೌರವ ಸಮರ್ಪಣೆಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿ ವಿನಂತಿ.

Writer - - ತಾರನಾಥ ಜೆ. ಮೇಸ್ತ, ಶೀರೂರು

contributor

Editor - - ತಾರನಾಥ ಜೆ. ಮೇಸ್ತ, ಶೀರೂರು

contributor

Similar News