ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಹೈದರಾಬಾದ್ ವಿವಿಯ ಪದವಿ ತಿರಸ್ಕರಿಸಿದ ಕವಿ ವಾಜಪೇಯಿ

Update: 2016-01-19 18:27 GMT

ಹೈದರಾಬಾದ್, ಜ.19: ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾದ ಆತ್ಮಹತ್ಯೆಗೆ ಕಾರಣವಾದಂತಹ ಸಂದರ್ಭಗಳನ್ನು ಪ್ರತಿಭಟಿಸಿ ಕವಿ ಅಶೋಕ್ ವಾಜಪೇಯಿ ಹೈದರಾಬಾದ್ ವಿಶ್ವವಿದ್ಯಾನಿಲಯ ತನಗೆ ನೀಡಿದ್ದ ಡಿಲಿಟ್ ಪದವಿಯನ್ನು ಇಂದು ಹಿಂದಿರುಗಿಸಿದ್ದಾರೆ.

2015ರಲ್ಲಿ ಖ್ಯಾತ ಲೇಖಕ ಎಂ.ಎಂ. ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ ತನ್ನ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.
ಹೈದರಾಬಾದ್ ವಿವಿಯ ದಲಿತ-ವಿರೋಧಿ ಧೋರಣೆಯ ಯುವ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಗೆ ಕಾರಣವಾಯಿತು. ತಾನು ಹೈದರಾಬಾದ್ ಕೇಂದ್ರೀಯ ವಿವಿಯ ಗೌರವಗಳ ಪಟ್ಟಿಯಲ್ಲಿ ಹೇಗಿರಲಿ? ಎಂದು ವಾಜಪೇಯಿ ಇಂಡಿಯಾ ಟುಡೇ ಟಿವಿಯಲ್ಲಿ ಪ್ರಶ್ನ್ನಿಸಿದ್ದಾರೆ.
ಘಟನೆಯೊಂದಿಗೆ ವಿಶ್ವವಿದ್ಯಾಲಯಕ್ಕೆ ಸಂಬಂಧವಿಲ್ಲವೆಂದು ತನಿಖೆಯಲ್ಲಿ ಸಾಬೀತಾದರೆ, ಬಳಿಕ, ಬಹುಶಃ ಮರುಪರಿಶೀಲಿಸಿಬಹುದು. ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಗೆ ಹಾಕಲಾಗಿತ್ತು. ಅವರು ಹಾಸ್ಟೆಲ್‌ನ ಹೊರಗೆ ಟೆಂಟೊಂದರಲ್ಲಿ ವಾಸಿಸುತ್ತಿದ್ದರು.
ಇದು ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವ ರೀತಿಯೇ? ಎಂದವರು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News