ಮೋದಿ, ಪಾರಿಕ್ಕರ್‌ಗೆ ‘ಐಸಿಸ್’ ಹತ್ಯೆ ಬೆದರಿಕೆ ಪತ್ರ
Update: 2016-01-20 00:15 IST
ಹೊಸದಿಲ್ಲಿ, ಜ.19: ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್‌ಗೆ ಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿರುವ ಪತ್ರವೊಂದು ಗೋವಾದ ರಾಜ್ಯ ಸಚಿವಾಲಯಕ್ಕೆ ಬಂದಿದೆ. ಭಯೋತ್ಪಾದಕ ಗುಂಪು ಐಸಿಸ್ ಹೆಸರಿನಲ್ಲಿ ಬರೆದಿರುವ ಈ ಬೆದರಿಕೆ ಪತ್ರವನ್ನು ಗೋವಾದ ಎಲ್ಲ್ಲ ಪೊಲೀಸ್‌ಠಾಣೆಗಳಿಗೂ ಪ್ರಸಾರ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹದಳಕ್ಕೆ ಹಸ್ತಾಂತರಿಸಲಾಗಿದೆ.
ಪೋಸ್ಟ್‌ಕಾರ್ಡ್‌ನಲ್ಲಿ ಬರೆದಿರುವ ಈ ಬೆದರಿಕೆ ಪತ್ರವು ಕಳೆದ ವಾರ ರಾಜ್ಯ ಸಚಿವಾಲಯಕ್ಕೆ ಆಗಮಿಸಿತ್ತು. ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಪತ್ರದ ಮೂಲವನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೆದರಿಕೆ ಪತ್ರದ ಕೊನೆಗೆ ಐಸಿಎಸ್ ಎಂದು ಬರೆಯಲಾಗಿದೆಯೆಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಗೋಹತ್ಯೆ ನಿಷೇಧದ ಕುರಿತು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆಯೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.