×
Ad

ನಕಲಿ ಆಧಾರ್ ಕಾರ್ಡ್!

Update: 2016-01-20 23:27 IST

ಲಗ್ನಪತ್ರಿಕೆ ರೀತಿಯಲ್ಲಿ ಆಧಾರ್ ಕಾರ್ಡನ್ನು ಕೂಡಾ ಪ್ರಿಂಟ್ ಮಾಡಿಕೊಡುತ್ತಿದ್ದ ಆರೇಳು ಜನರ ತಂಡದ ಜಾಲವೊಂದು ಮೈಸೂರಲ್ಲಿ ಪತ್ತೆಯಾಗಿದೆ. ಈ ತಂಡ ಮನೆ-ಮನೆಗೆ ತೆರಳಿ ಸಾವಿರದವರೆಗೂ ಹಣ ಪಡೆದು ಸ್ಥಳದಲ್ಲೇ ಆಧಾರ್ ಕಾರ್ಡ್ ಪ್ರಿಂಟ್ ಮಾಡಿಕೊಡುವ ವಿಚಾರ ಬೆಳಕಿಗೆ ಬಂದಿದೆ. ಇದು ನಿಜಕ್ಕೂ ಆತಂಕಕಾರಿ. ಪ್ರಮುಖವಾಗಿ ಇಂತಹ ಮೋಸದ ಜಾಲ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದೆ. ಆಧಾರ್ ಕಾರ್ಡ್ ಎಲ್ಲಿ ಮಾಡಬೇಕು..? ಹೇಗೆ ಮಾಡಿಸಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲದ ಮಂದಿ ಇಂತಹ ಮೋಸಗಾರರ ಮಾತನ್ನು ನಂಬಿ ಎಲ್ಲಾ ವಿವರಗಳನ್ನು ನೀಡಿ ಮೋಸ ಹೋಗುತ್ತಿದ್ದಾರೆ. ಕೂಡಲೇ ಸರಕಾರ ಈ ಬಗ್ಗೆ ಜಾಗೃತಿ ಮೂಡಿಸಿ ನಕಲಿ ಆಧಾರ್ ಕಾರ್ಡ್ ಹಾವಳಿಗೆ ಬ್ರೇಕ್ ಹಾಕಬೇಕಾಗಿದೆ.
 

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News