ಅಲಿಗಡ, ಜಾಮಿಯಾ ಮಿಲ್ಲಿಯಾದಲ್ಲಿ ಮುಸ್ಲಿಮ್ ಮೀಸಲಾತಿಗೆ ಕೇಂದ್ರದ ಆಕ್ಷೇಪ

Update: 2016-01-20 18:28 GMT

ಪಿಎಫ್‌ಐ ಕಳವಳ

ದಿಲ್ಲಿ, ಜ.20: ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ವಿರುದ್ಧದ ಅಪಪ್ರಚಾರ ಹಾಗೂ ಅಲ್ಪಸಂಖ್ಯಾತರ ಸಂಸ್ಥೆಗಳಾದ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಮುಸ್ಲಿಮರ ಮೀಸಲಾತಿಯನ್ನು ವಿರೋಧಿಸುವ ಕೇಂದ್ರ ಸರಕಾರದ ನಿಲುವಿನ ಕುರಿತಂತೆ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಭೆಯು ಕಳವಳ ವ್ಯಕ್ತ ಪಡಿಸಿದೆ. ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ ಅಲ್ಪಸಂಖ್ಯಾತರ ವಿಶ್ವವಿದ್ಯಾನಿಲಯ ಅಲ್ಲ ಎಂಬ ಕೇಂದ್ರ ಸರಕಾರದ ನಿಲುವನ್ನು ಆಟಾರ್ನಿ ಜನರಲ್ ಮುಕುಲ್ ರೋಹಿತ್‌ಶರ್ಮಾ ಅವರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. ಜಾಮಿಯಾ ಮಿಲ್ಲಿಯಾದ ವಿರುದ್ಧವೂ ಅವರು ಅದೇ ನಿಲುವನ್ನು ಹೊಂದಿದ್ದಾರೆ. ಇದು ಈ ಹಿಂದಿನ ಎಲ್ಲಾ ಸರಕಾರಗಳು ತಳೆದ ನಿಲುವಿನ ವಿರುದ್ಧ ನಡೆಯಾಗಿದೆ. ಅಲ್ಪಸಂಖ್ಯಾತರ ಕುರಿತಂತೆ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ನಿಲುವನ್ನು ಹಿಂದಿನ ಸರಕಾರಗಳು ವಿವಿಧ ಮಸೂದೆಗಳು ಮತ್ತು ಕಾನೂನಿನ ಮೂಲಕ ಹಲವು ಬಾರಿ ಸಮರ್ಥಿಸಿಕೊಂಡಿದೆ. ಆದರೆ ಈಗಿನ ಕೇಂದ್ರಸರಕಾರದ ಬದಲಾದ ನೀತಿಯು ಅಲ್ಪಸಂಖ್ಯಾತರಿಗೆ ಎಲ್ಲಾ ರೀತಿಯಲ್ಲೂ ಕೆಟ್ಟ ಸಂದೇಶವನ್ನು ರವಾನಿಸುತ್ತಿದೆ. ಹಿಂದುಳಿದವರಲ್ಲಿ ಅತ್ಯಂತ ಹಿಂದುಳಿದ ಒಂದು ಸಮುದಾಯದ ಉದ್ಧಾರ ಕೇವಲ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗಿರುವ ಭರವಸೆಯ ಕಿಂಡಿಯನ್ನು ಸರಕಾರ ಮುಚ್ಚುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿರೋಧವಾದ ಇಂತಹ ನಡೆಗಳನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಲು ನಾವು ಇತರ ಸಂಘಟನೆಗಳಿಗೆ ಮತ್ತು ಎಲ್ಲಾ ವಿಭಾಗದ ಜನರಿಗೆ ಕರೆ ನೀಡತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News