×
Ad

ಹೈದರಾಬಾದ್ : ದಲಿತ ವಿದ್ಯಾರ್ಥಿಗಳ ಅಮಾನತು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾದ ವಿವಿ

Update: 2016-01-21 20:21 IST

ಸತ್ಯಶೋಧನಾ ಸಮಿತಿ ವರದಿ

 ಹೈದರಾಬಾದ್,ಜ.21: ದಲಿತ ವಿದ್ಯಾರ್ಥಿಗಳ ಅಮಾನತಿಗೆ ಸಂಬಂಸಿ, ಉಂಟಾಗಿದ್ದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಹೈದರಾಬಾದ್ ವಿವಿಯ ಆಡಳಿತ ಮಂಡಳಿಯು ಲೋಪವೆಸಗಿದೆಯೆಂದು ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದ್ವಿಸದಸ್ಯ ಸತ್ಯಶೋಧನಾ ಸಮಿತಿ ಅಭಿಪ್ರಾಯಿಸಿದೆ.

ಕೇಂದ್ರ ಮಾನವಸಂಪನ್ಮೂಲ ಇಲಾಖೆ ರಚಿಸಿದ ಈ ಸಮಿತಿಯು ತನ್ನ ವರದಿಯನ್ನು ಶನಿವಾರದೊಳಗೆ ಸಲ್ಲಿಸುವ ನಿರೀಕ್ಷೆಯಿದೆ. ಈ ವರದಿಯನ್ನು ಆಧರಿಸಿ, ಸಚಿವಾಲಯವು ವಿವಿ ಕುಲಪತಿ ಪ್ರೊ. ಅಪ್ಪಾರಾವ್ ಅವರನ್ನು ಉಚ್ಚಾಟಿಸುವ ಸಾಧ್ಯತೆ ಯಿದೆಯೆನ್ನಲಾಗಿದೆ.ಅಪ್ಪಾರಾವ್, 2001ರಿಂದ 2004ರ ನಡುವೆ ವಿವಿ ಕ್ಯಾಂಪಸ್‌ನ ಮುಖ್ಯವಾರ್ಡನ್ ಆಗಿದ್ದಾಗಲೇ, ಅವರ ವಿರುದ್ಧ ದಲಿತ ವಿದ್ಯಾರ್ಥಿಗಳಲ್ಲಿ ಬಲವಾದ ಅಸಮಾಧಾನವಿತ್ತು. ವಿವಿಯ ಹಾಸ್ಟೆಲ್ ಹಾಗೂ ಭೋಜನಗೃಹಗಳಲ್ಲಿ, ಅಪ್ಪಾರಾವ್ ದಲಿತ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು.

 ಕಳೆದ ಸೆಪ್ಟೆಂಬರ್‌ನಲ್ಲಿ ವಿವಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಬಳಿಕ ರೋಹಿತ್ ವೇಮುಲಾ ಸಹಿತ ಐವರು ದಲಿತ ವಿದ್ಯಾರ್ಥಿ ಅಮಾನತು ಪ್ರಕರಣವು ಅಪ್ಪಾರಾವ್ ವಿರುದ್ದದ ಆರೋಪಗಳಿಗೆ ಪುಷ್ಟಿ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News