ಇಕ್ವೆಡಾರ್ ರಾಯಭಾರಿ ಕಚೇರಿಯಲ್ಲೇ ಅಸಾಂಜ್ ವಿಚಾರಣೆ
Update: 2016-01-21 23:34 IST
ಲಂಡನ್, ಜ. 21: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಅವರು ಆಶ್ರಯ ಪಡೆದಿರುವ ಇಲ್ಲಿನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಸ್ವೀಡನ್ ಪೊಲೀಸರು ಪ್ರಶ್ನಿಸಲಿದ್ದಾರೆ.
ಸ್ವೀಡನ್‌ನಲ್ಲಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಅವರ ಮೇಲಿದೆ. ಬಂಧನ ಭೀತಿಗೆ ಒಳಗಾಗಿರುವ ಅವರು 2012 ಜೂನ್‌ನಿಂದ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.
ಈ ಸಂಬಂಧ ಸ್ವೀಡನ್‌ನ ಅಧಿಕಾರಿಗಳೊಂದಿಗೆ ತಿಳುವಳಿಕೆಯೊಂದಕ್ಕೆ ಬರಲಾಗಿದೆ ಎಂದು ಇಕ್ವೆಡಾರ್ ಅಧ್ಯಕ್ಷ ಕೊರಿಯ ತಿಳಿಸಿದರು.