ಹೈದರಾಬಾದ್ ವಿವಿ ವಿವಾದ: ಉಪಕುಲಪತಿಯ ಭೇಟಿಗೆ ರೋಹಿತ್‌ರ ತಾಯಿಯ ನಿರಾಕರಣೆ
ಹೈದರಾಬಾದ್, ಜ.22: ಹೈದರಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪಾ ರಾವ್ ಪೊದಿಲೆಯವರನ್ನು ಮನೆಯಲ್ಲಿ ಭೇಟಿ ಮಾಡಲು ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ತಾಯಿ ಇಂದು ನಿರಾಕರಿಸಿದ್ದಾರೆ. ತಾನವರನ್ನು ಕೇವಲ ವಿವಿ ಕ್ಯಾಂಪಸ್‌ನಲ್ಲಿ ಮಾತ್ರ ವಜಾಗೊಳಿಸಲಾಗಿರುವ ಇತರ ನಾಲ್ವರು ದಲಿತ ವಿದ್ಯಾರ್ಥಿಗಳೊಂದಿಗೆ ಭೇಟಿ ಮಾಡುವೆನೆಂದು ಅವರು ಹೇಳಿದ್ದಾರೆ.
ಉಪಕುಲಪತಿ ಇಂದು ಇಬ್ಬರು ಪ್ರೊಫೆಸರ್‌ಗಳೊಂದಿಗೆ ರೋಹಿತ್‌ರ ತಾಯಿ ರಾಧಿಕಾರನ್ನು ಭೇಟಿಯಾಗಲು ಉಪಲ್ ಪ್ರದೇಶದ ಅವರ ಮನೆಗೆ ಹೋಗಿದ್ದರು.
ತಾನು ಇಂದು ಇಬ್ಬರು ಪ್ರೊಫೆಸರ್‌ಗಳ ಜೊತೆಗೆ ರೋಹಿತ್‌ರ ತಾಯಿಯನ್ನು ಭೇಟಿಯಾಗಲೆಂದು ಹೋಗಿದ್ದೆ. ತಾನು ಹೋಗುವ ಬಗ್ಗೆ ಹಾಗೂ ಆಕೆಯನ್ನು ಭೇಟಿಯಾಗಲು ಇಚ್ಛಿಸಿರುವ ಬಗ್ಗೆ ಪ್ರೊಫೆಸರ್‌ಗಳು ಮೊದಲೇ ಅವರಿಗೆ ತಿಳಿಸಿದ್ದರು. ಆದರೆ, ತಾನು ನಾಲ್ವರು ದಲಿತ ವಿದ್ಯಾರ್ಥಿಗಳೊಂದಿಗೆ ಕೇವಲ ಕಾಂಪಸ್‌ನಲ್ಲಷ್ಟೇ ತನ್ನನ್ನು ಭೇಟಿ ಮಾಡುವೆನೆಂದು ರಾಧಿಕಾ ಪ್ರೊಫೆಸರ್‌ಗಳಲ್ಲಿ ತಿಳಿಸಿದರೆಂದು ಅಪ್ಪಾರಾವ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಸಂಬಂಧ ವಾಗ್ದಾಳಿಗೆ ಗುರಿಯಾಗಿರುವ ಅಪ್ಪಾರಾವ್, ಪ್ರೊಫೆಸರ್‌ಗಳಾದ ಗೀತಾ ಹಾಗೂ ಪ್ರಕಾಶ್ ಬಾಬು ಎಂಬವರು ರಾಧಿಕಾರನ್ನು ಭೇಟಿಯಾಗಿದ್ದ ವೇಳೆ ಅವರು ತನ್ನ ರಾಜೀನಾಮೆಗೆ ಆಗ್ರಹಿಸಿದುದಕ್ಕೆ ವಿಷಾದ ವ್ಯಕ್ತಪಡಿಸಿದ್ದರೆಂದು ಪ್ರತಿಪಾದಿಸಿದ್ದಾರೆ.
ತಮಗೆ ಇತರ ನಾಲ್ವರು ವಿದ್ಯಾರ್ಥಿಗಳೊಂದಿಗೆ ಕ್ಯಾಂಪಸ್‌ನಲ್ಲಿ ಉಪಕುಲಪತಿಯನ್ನು ಭೇಟಿಯಾಗುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಹೊರ ನಡೆಯಲ್ಲವೆಂದು ರಾಧಿಕಾ, ಪ್ರೋ. ಗೀತಾರಲ್ಲಿ ತಿಳಿಸಿದ್ದರೆಂದು ಅಪ್ಪಾರಾವ್ ಹೇಳಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ, ದ್ವಿಸದಸ್ಯ ಸಮಿತಿಯ ವರದಿಯ ಆಧಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ತನ್ನ ತಾಯಿಗೆ ನೀಡಿದ್ದಾರೆಂದು ರೋಹಿತ್‌ರ ಸೋದರ ರಾಜಾ ಎಂಬವರು ತಿಳಿಸಿದ್ದಾರೆ.