ವಿಷಪ್ರಾಶನವೇ ಸುನಂದಾ ಸಾವಿಗೆ ಕಾರಣ: ಏಮ್ಸ್
ಹೊಸದಿಲ್ಲಿ,ಜ.22: ಸುನಂದಾ ಪುಷ್ಕರ್ ವಿಷಪ್ರಾಶನದಿಂದಲೇ ಸಾವಿಗೀಡಾಗಿದ್ದರು ಎಂಬುದನ್ನು ಏಮ್ಸ್ ವೈದ್ಯಕೀಯ ಮಂಡಳಿ ಸ್ಪಷ್ಟಪಡಿಸಿದೆ. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ ಎಫ್‌ಐಎ ನೀಡಿದ್ದ ವರದಿಯನ್ನು ಆಧರಿಸಿ ಅದು ಈ ತೀರ್ಮಾನಕ್ಕೆ ಬಂದಿದೆ.ಆಕೆಯ ಉದರದಲ್ಲಿ ಅಲ್ಪ್ರಾಕ್ಸ್ ಎಂಬ ಡ್ರಗ್ಸ್ ಇತ್ತು ಎಂಬ ಹಿಂದಿನ ವರದಿಗೆ ಇದು ಹೆಚ್ಚು ಪುಷ್ಟಿ ನೀಡಿದೆ.
ಲಿಡೊಕೈನ್ ಎಂಬ ಹೆಸರಿನ ವಿಷ ಪದಾರ್ಥವು ಆಕೆಯ ದೇಹದಲ್ಲಿತ್ತು ಎಂಬುದನ್ನು ಎಫ್‌ಐಎ ವರದಿ ದೃಢೀಕರಿಸಿರುವುದಾಗಿ ಏಮ್ಸ್ ತಿಳಿಸಿದೆ. ಬೇರೆ ರೀತಿಯ ವಿಷಕಾರಿ ಪದಾರ್ಥಗಳನ್ನು ಶರೀರದೊಳಗೆ ಪೂರಣ ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆ ಯಲಾಗದು ಎಂದು ಅದು ಹೇಳಿದೆ. ಡ್ರಗ್ಸ್‌ಗಳ ಸಂಯೋಜನೆಯಿಂದಾಗಿ ಸಾವು ಸಂಭವಿಸಿದೆ ಎಂಬ ವರದಿಯನ್ನು ಅದು ತಳ್ಳಿಹಾಕಿದೆ. ವಿಶೇಷ ತನಿಖಾ ದಳವು ಪ್ರಕರಣವನ್ನು ಕೂಲಂಕಷವಾಗಿ ತನಿಖೆಗೊಳಪಡಿಸಬೇಕು. ಸುನಂದಾ ಶರೀರದಲ್ಲಿ ಸಿರಿಂಜ್ ಚುಚ್ಚಿದ ಗುರುತು ಪತ್ತೆಯಾಗಿದ್ದು, ಯಾವ ರೀತಿಯ ಸಿರಿಂಜ್ ಇದು ಎಂಬುದನ್ನು ಪರಿಗಣಿಸಿ ಏಜೆಂಟ್‌ನ್ನು ವಿಚಾರಣೆಗೊಳಪಡಿಸಬೇಕು ಎಂದು ಮೂಲಗಳು ತಿಳಿಸಿವೆ.